ಮೈಸೂರು

ಸುತ್ತೂರು ಜೆಎಸ್‍ಎಸ್ ಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮೈಸೂರು,ಏ.1:- ಸುತ್ತೂರು ಶ್ರೀಕ್ಷೇತ್ರದ ಜೆಎಸ್‍ಎಸ್ ಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯದ 2019-20ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕನ್ನಡ ಮಾಧ್ಯಮಕ್ಕೆ 1 ರಿಂದ 7ನೇ ತರಗತಿವರೆಗೆ ಮತ್ತು ಇಂಗ್ಲೀಷ್ ಮಾಧ್ಯಮದ 1 ಹಾಗೂ 5 ನೇ ತರಗತಿಗಳಿಗಾಗಿ ಹಾಗೂ ಕನ್ನಡ, ಇಂಗ್ಲೀಷ್ ಮಾಧ್ಯಮದ 8ನೇ ತರಗತಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಗ್ರಾಮಾಂತರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ (ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಅಶಕ್ತರು ಮುಂತಾದ ಕಡುಬಡವರು) ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು. ಅರ್ಜಿಗಳನ್ನು ಏಪ್ರಿಲ್ 10 ರಿಂದ ವಿತರಿಸಲಾಗುತ್ತ್ತದೆ. ಅರ್ಜಿಯನ್ನು ಶಾಲಾ ಕಛೇರಿಯಲ್ಲಿ ಖುದ್ದಾಗಿ ಪಡೆಯಬಹುದು ಅಥವಾ www.jssonline.org ಹಾಗೂ www.jsskvk.in ವೆಬ್‍ಸೈಟ್‍ನಿಂದ ನೇರವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಮೇ 10ರ ಒಳಗಾಗಿ ಸಲ್ಲಿಸಬೇಕು. ಅಂಚೆ ಮುಖಾಂತರ ಅರ್ಜಿ ಪಡೆಯಲು ಇಚ್ಛಿಸುವವರು ವಿದ್ಯಾರ್ಥಿಯು ಪ್ರವೇಶ ಬಯಸುವ ತರಗತಿಯ ವಿವರ ಹಾಗೂ ಸ್ವವಿಳಾಸವುಳ್ಳ 5 ರೂ.ಗಳ ಪೋಸ್ಟಲ್ ಸ್ಟ್ಯಾಂಪ್ ಹಚ್ಚಿದ ಲಕೋಟೆಯನ್ನು ಆಡಳಿತಾಧಿಕಾರಿಗಳು, ಜೆಎಸ್‍ಎಸ್ ಸಂಸ್ಥೆಗಳು, ಸುತ್ತೂರು-571129, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಿ ಪಡೆಯಬಹುದು.

ಅರ್ಜಿ ಪಡೆಯಲು ಅಥವಾ ಪ್ರಕ್ರಿಯೆಯ ಯಾವುದೇ ಸಂದರ್ಭದಲ್ಲಿ ಪೋಷಕರು ಅಥವಾ ಪಾಲಕರು ಯಾವುದೇ ಮಧ್ಯವರ್ತಿಗಳನ್ನು ಅವಲಂಬಿಸಬೇಕಾದ ಅಗತ್ಯವಿಲ್ಲ. ನೇರವಾಗಿ ಶಾಲಾ ಕಛೇರಿಯನ್ನು  ಸಂಪರ್ಕಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಪ್ರಾಥಮಿಕ ಶಾಲೆ 08221-232054, ಪ್ರೌಢಶಾಲೆ 08221-232653, ಬಸವೇಶ್ವರ ವಿದ್ಯಾರ್ಥಿನಿಲಯ 08221-232332, ಸಂಯೋಜನಾಧಿಕಾರಿಗಳ ಕಛೇರಿ 08221-232323 ಇವರುಗಳನ್ನು ಕ್ರಮವಾಗಿ ಈ ದೂರವಾಣಿಗಳಲ್ಲಿ ಸಂಪರ್ಕಿಸಿ ವಿವರ ಪಡೆಯಬಹುದಾಗಿದೆ. (ಎಸ್.ಎಚ್)

Leave a Reply

comments

Related Articles

error: