ಮೈಸೂರು

ಮೈಸೂರು ಕನ್ನಡ ವೇದಿಕೆ ವತಿಯಿಂದ ಸಿದ್ದಗಂಗಾ ಶ್ರೀಗಳ 112ನೇ ಜನ್ಮದಿನ ಆಚರಣೆ

ಮೈಸೂರು,ಏ.1:- ಮೈಸೂರು ಕನ್ನಡ ವೇದಿಕೆ ವತಿಯಿಂದ ಸಿದ್ದಗಂಗಾ ಶ್ರೀ ಡಾ.ಶಿವಕುಮಾರಸ್ವಾಮೀಜಿಯವರ  112ನೇ ಜನ್ಮದಿನವನ್ನು  ಆಚರಣೆ ಮಾಡಲಾಯಿತು.

ನಗರದ ತ್ಯಾಗರಾಜ ರಸ್ತೆ ಯಲ್ಲಿಂದು ಶ್ರಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಅರ್ಪಿಸಿ ನಮನ ಸಲ್ಲಿಸಲಾಯಿತು ಇದೇ ಸಂದರ್ಭದಲ್ಲಿ ಗೌರವ ಅಧ್ಯಕ್ಷ ನಾಲಾಬೀದಿ ರವಿ ಮಾತನಾಡಿ, ಸ್ವಾಮಿ ವಿವೇಕಾನಂದರು ಒಂದು ಮಾತನ್ನು ಹೇಳಿದ್ದರು. ಸಮಾಜ ನಮಗೆ ಏನು ಮಾಡಿದೆ ಅನ್ನೋದಕ್ಕಿಂತ ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಅನ್ನೋದು ಬಹಳ ಮುಖ್ಯ. ಹಾಗೇ ಸಿದ್ದಗಂಗಾ ಶ್ರೀಗಳು ಅಕ್ಷರ ದಾಸೋಹ ತೆರೆದು ಲಕ್ಷಾಂತರ ಬಡ, ರೈತರ ಮಕ್ಕಳಿಗೆ  ವಿದ್ಯಾ ದಾನ, ಮಾಡಿದ್ದಾರೆ. ವಿದ್ಯಾ ದಾನದ ಜೊತೆಗೆ ಅನ್ನ ಕೂಡ ನೀಡಿದ್ದಾರೆ. ರಾಜಕೀಯ ಪಕ್ಷಗಳು ಮಾಡದಂತಹ ಅನೇಕ ಕೆಲಸಗಳನ್ನು ಶ್ರೀಗಳು ಮಾಡಿದ್ದಾರೆ. ಸಮಾಜಕ್ಕೆ ಶ್ರೀಗಳು ನೀಡಿರುವ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು..

ಕಾರ್ಯಕ್ರಮ ದಲ್ಲಿ ಅಧ್ಯಕ್ಷರಾದ ಎಸ್ ಬಾಲಕೃಷ್ಣ, ಸದಸ್ಯರಾದ ಪ್ಯಾಲೇಸ್ ಬಾಬು, ಗಾಯಿತ್ರಮ್ಮ, ಗುರು, ಸತೀಶ್, ಮಹದೇವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: