ಸುದ್ದಿ ಸಂಕ್ಷಿಪ್ತ

“ತಪ್ಪಿಸಿಕೊಂಡವರು” “ದೇಶ ಇದ್ದರೆ ನಾವು” ಕೃತಿಗಳ ಬಿಡುಗಡೆ ಕಾರ್ಯಕ್ರಮ

ಕರ್ನಾಟಕ ಜನಪರ ಆಂದೋಲನ (ಜನಪ) ಮೈಸೂರು ವತಿಯಿಂದ ಜೋಗನಹಳ್ಳಿ ಗುರುಮೂರ್ತಿಯವರ ‘ತಪ್ಪಿಸಿಕೊಂಡವರು’ ಕಾದಂಬರಿ ಮತ್ತು ‘ದೇಶ ಇದ್ದರೆ ನಾವು’ ವಿಚಾರ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜ.29 ಭಾನುವಾರ ಸಂಜೆ 4 ಗಂಟೆಗೆ ಕಲಾಮಂದಿರದ ಮನೆಯಂಗಳದಲ್ಲಿ ಕಾರ್ಯಕ್ರಮ ನಡೆಯಲಿದ್ದು  ಖ್ಯಾತ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾನತೆಗಾಗಿ ಜನಾಂದೋಲನ ಮುಖಂಡರಾದ ಸಿರಿಮನೆ ನಾಗರಾಜು ಅವರು “ತಪ್ಪಿಸಿಕೊಂಡವರು” ಕೃತಿ ಬಿಡುಗಡೆ ಮಾಡುವರು.

ಕರ್ನಾಟಕ ರಾಜ್ಯ ರೈತಸಂಘದ ಸಂಚಾಲಕರು ಮತ್ತು ನ್ಯಾಯವಾದಿ ಎನ್‍.ನಂಜೇಗೌಡ ಅವರು “ದೇಶ ಇದ್ದರೆ ನಾವು” ಕೃತಿ ಬಿಡುಗಡೆ ಮಾಡಲಿದ್ದಾರೆ.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ.ಸಿ.ನಾಗಣ್ಣ ಅವರು ತಪ್ಪಿಸಿಕೊಂಡವರು ಕೃತಿಯ ಕುರಿತು ಹಾಗೂ ಮೈಸೂರು ವಿವಿ ಗಾಂಧಿಭವನದ ನಿರ್ದೇಶಕರಾದ ಪ್ರೊ. ಎಸ್.ಶಿರಾಜಪ್ಪ ಅವರು “ದೇಶ ಇದ್ದರೆ ನಾವು” ಕೃತಿಯ ಕುರಿತು ಮಾತನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: