ಮೈಸೂರು

ಸಿಪಿಕೆ 80ರ ಸಂಭ್ರಮ : ಕೃತಿ ಬಿಡುಗಡೆ .8.

ಮೈಸೂರು,ಏ.1 : ಅರಸು ಜಾಗೃತಿ ಅಕಾಡೆಮಿ ಹಾಗೂ ನೃತಪತುಂಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಿ.ಪಿ.ಕೆ.80ರ ಸಂಭ್ರಮ ಹಾಗೂ ಸಿಪಿಕೆ ಚುಟುಕು ತೋರಣ ಕೃತಿ ಬಿಡುಗಡೆಯನ್ನು ಏ.8ರಂದು ಸಂಜೆ 4 ಗಂಟೆಗೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಏರ್ಪಡಿಸಲಾಗಿದೆ.

ಆದಿ ಚುಂಚುನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ಇರುವರು, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಸಿಪಿಕೆ ಚುಟುಕು ತೋರಣ ಮತ್ತು ಕಾವ್ಯಕ್ಕೆ ಗುರು ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ.

ಅಲ್ಲದೇ ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ 9 ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಅಕಾಡೆಮಿ ಕಚೇರಿ ಕಾರ್ಯದರ್ಶಿ ಸವಿತ ಅರಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಅರ್)

Leave a Reply

comments

Related Articles

error: