ಪ್ರಮುಖ ಸುದ್ದಿಮೈಸೂರು

ಜಾತ್ಯಾತೀತರನ್ನು ಬೆಂಬಲಿಸಲು ‘ಸೈಕಲ್’ ನಿರ್ಧಾರ

ಮೈಸೂರು,ಏ.1 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೊರತುಪಡಿಸಿ ಜಾತ್ಯಾತೀತ ಪಕ್ಷಗಳನ್ನು ಬೆಂಬಲಿಸಿ ರಾಜ್ಯಾದ್ಯಂತ ಆಂದೋಲನದ ಮೂಲಕ ಮತ ಯಾಚಿಸಲು ಸಮಾಜವಾದಿ ಪಕ್ಷವು ನಿರ್ಣಯಕೈಗೊಳ್ಳಲಾಗಿದೆ.

ರಾಮ್ ಮನೋಹರ್ ಲೋಹಿಯಾ, ಜಯಪ್ರಕಾಶ್, ನಾರಾಯಣ ಶಾಂತವೇರಿ ಗೋಪಾಲಗೌಡ ಸ್ಥಾಪಿತ ಸಮಾಜವಾದಿ ಪಕ್ಷ ಕಾಂಗ್ರೆಸ್ ನಂತರ ಅತಿ ಹಿರಿಯ ರಾಜಕೀಯ ಪಕ್ಷವಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ತನ್ನದೇ ಆದ ತತ್ವ ಸಿದ್ಧಾಂತ ರಾಜಕಾರಣ ನಡೆಸುತ್ತಿದೆ, ಸಾಮಾಜಿಕ ನ್ಯಾಯ-ಜಾತ್ಯಾತೀತ-ಆರ್ಥಿಕ ಸಮಾನತೆ ಮತ್ತಿತತರ ಮೌಲ್ಯಾಧಾರಿತ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಕಾರ್ಯ ನಿರ್ವಹಿಸುತ್ತಿದ್ದು ಜಾತಿ ಹೆಸರಲ್ಲಿ ಮತ ಹಂಚಿ ಹೋಗಬಾರದೆಂಬ ನಿಟ್ಟಿನಲ್ಲಿ ಜಾತ್ಯಾತೀತರನ್ನು ಬೆಂಬಲಿಸುವುದಾಗಿ ಜಿಲ್ಲಾಧ್ಯಕ್ಷ ಬಿ.ಕೆ.ಗೌಡ ತಿಳಿಸಿದ್ದಾರೆ.

ರಾಜ್ಯದ ಮೈತ್ರಿ ಸರ್ಕಾರದ ಪಕ್ಷಗಳ ಅಭ್ಯರ್ಥಿಗಳ ಪರ ಮತಯಾಚನೆಗೆ ಆಂದೋಲನ ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: