ದೇಶಪ್ರಮುಖ ಸುದ್ದಿ

ಒಲಿಂಪಿಕ್ಸ್ ಪದಕ ವಿಜೇತರು ಇದೀಗ ರಾಜಕೀಯದ ಅಖಾದಲ್ಲಿ ಎದುರಾಳಿಗಳು!

ನವದೆಹಲಿ (ಏ.2): ಈ ಲೋಕಸಭಾ ಚುನಾವಣೆಯಲ್ಲಿ ಕ್ರಿಕೆಟಿಗ ಗೌತಮ್‍ಗಂಭೀರ್ ಬಿಜೆಪಿ ಚಿಹ್ನೆಯಡಿ ಸ್ಪರ್ಧೆಗಿಳಿದಿದ್ದರೆ, ಡಿಸ್ಕಸ್ ಥ್ರೋನಲ್ಲಿ 2010ರ ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕ ಗೆದ್ದಿರುವ ಕೃಷ್ಣ ಪೂನಿಯಾ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ.

ಕೃಷ್ಣ ಪೂನಿಯಾ ಜೈಪುರ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿದರೆ ಇವರ ಪ್ರತಿಸ್ಪರ್ಧಿಯಾಗಿ ಶೂಟರ್ ಹಾಗೂ ಕೇಂದ್ರ ಕ್ರೀಡಾ ಸಚಿವರಾಗಿದ್ದ ರಾಜವರ್ಧನ್ ರಥೋಡ್ ಪ್ರತಿಸ್ಪರ್ಧೆಯೊಡ್ಡಲಿದ್ದಾರೆ. ರಾಜವರ್ಧನ್ ರಥೋಡ್ ಕೂಡ ಒಲಿಪಿಂಕ್ಸ್‍ನಲ್ಲಿ ಪದಕ ಗೆದ್ದಿದ್ದು ಕಳೆದ ಬಾರಿಯ ಚುನಾವಣಾ ಅಖಾಡಕ್ಕಿಳಿದು ಬಿಜೆಪಿ ಪಕ್ಷದಿಂದ ಜೈಪುರ ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದರು.

ಈಗ ಒಂದೇ ಕ್ಷೇತ್ರದಲ್ಲಿ ಒಲಿಪಿಂಕ್ಸ್‍ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿರುವ ಕೃಷ್ಣ ಪೂನಿಯಾ ಹಾಗೂ ರಾಜವರ್ಧನ್ ರಥೋಡ್ ಜೈಪುರ ಕ್ಷೇತ್ರದಲ್ಲಿ ಅಖಾಡಿಕ್ಕಿಳಿದಿರುವುದರಿಂದ ಪ್ರಚಾರದ ಕಾವು ಹೆಚ್ಚಾಗಲಿದ್ದು ಮತದಾರರು ಯಾರಿಗೆ ಒಲವು ತೋರಲಿದ್ದಾರೆ ಎಂಬ ಯಕ್ಷಪ್ರಶ್ನೆ ಎದುರಾಗಿದೆ. (ಎನ್.ಬಿ)

Leave a Reply

comments

Related Articles

error: