ಮೈಸೂರು

ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ 155ನೇ ಜಯಂತಿ ಆಚರಣೆ

ನಗರದ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈಚೆಗೆ ಸ್ವಾಮಿ ವಿವೇಕಾನಂದರ 155ನೇ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಎಲ್. ಬಸವರಾಜ ಅವರು, ವೀರಸನ್ಯಾಸಿ, ಆಧ್ಯಾತ್ಮದ ರಾಯಭಾರಿಯಾಗಿದ್ದ ವಿವೇಕಾನಂದರು ಯುವಕರಿಗೆ ಹಾಗೂ ಸಮಾಜಕ್ಕೆ ಸದಾ ಪ್ರೇರಕದಾತರು ಮತ್ತು ಮಾರ್ಗದರ್ಶಕರು ಎಂದು ತಿಳಿಸಿದರು.

ಕಾಲೇಜಿನ ಮಾನವಿಕ ವಿಭಾಗದ ಮುಖ್ಯಸ್ಥ ಸಿ.ಚಂದ್ರಶೇಖರ್ ಮಾತನಾಡಿ “ನಿನ್ನೊಳಗೆ ಎಲ್ಲ ಶಕ್ತಿಯೂ ಅಡಗಿದ್ದು, ಅಸಾಧ್ಯವನ್ನು ಸಾಧಿಸಬಹುದು. ಆ ನಂಬಿಕೆ ನಿನ್ನಲ್ಲಿರಲಿ, ನಿನ್ನೊಳಗಿರುವ ದುರ್ಬಲತೆಯನ್ನು ಹೊಡೆದೊಡಿಸು. ದೈವತ್ವ –ಧ್ಯಾನದಡೆಗೆ ಮನ ಮಾಡಿ ಏಕಾಗ್ರತೆಯಿಂದ ಸಾಧಿಸು” ಎನ್ನುವ ವಿವೇಕಾನಂದರ ವಾಣಿಯನ್ನು ತಿಳಿಸಿ, ಅಚಡಣೆ ಹಾಗೂ ಅಡ್ಡಿ ಆತಂಕಗಳು ಸಾಧನೆಯಲ್ಲಿ ಸಾಮಾನ್ಯವಾಗಿದ್ದು ವಿಮುಖರಾಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕೀರ್ತನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಜಿ. ನಂದೀಶ್ ಸ್ವಾಗತಿಸಿದರು. ಹಲವಾರು ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು.

Leave a Reply

comments

Related Articles

error: