ಮೈಸೂರು

ಸಿವಿಲ್ ವಿಭಾಗದಲ್ಲಿ ‘ಅಖಿಲಾ’ಗೆ ಚಿನ್ನದ ಪದಕ

ಈಚೆಗೆ ಬೆಳಗಾವಿಯ ಜ್ಞಾನಸಂಗಮ ಸಭಾಂಗಣದಲ್ಲಿ ಜರುಗಿದ ವಿಟಿಯು 16ನೇ ಘಟಿಕೋತ್ಸವದಲ್ಲಿ ನಗರದ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಸಿವಿಲ‍್ ವಿಭಾಗದ ಅಖಿಲಾ ಸಿ.ಜಿ. ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಅಖಿಲಾ ಅವರು ಪ್ರಸ್ತಕ ಶೈಕ್ಷಣಿಕ ಸಾಲಿನಲ್ಲಿ ಸಿವಿಲ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದಿದ್ದು 100ಕ್ಕೆ ಶೇ.98ರಷ್ಟು ಅಂಕಗಳನ್ನು ಪಡೆದಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ಹಾಗೂ ಸಿಬ್ಬಂದಿ ವರ್ಗವೂ ಶುಭ ಹಾರೈಸಿದೆ.

Leave a Reply

comments

Related Articles

error: