ಮೈಸೂರು

ಸ್ಕೂಟರ್’ಗೆ ಕಾರು ಡಿಕ್ಕಿ : ಮಗು ಸಾವು

ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಲ್ ಆಫ್ ಮೈಸೂರು ಹಿಂಭಾಗದ ರೇಸ್ ಕೋರ್ಸ್ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.

ನಂಜುಮಳಿಗೆ ನಿವಾಸಿ ಮಹಮ್ಮದ್ ತೌಹೀಬ್ ಅವರ ಪುತ್ರಿ ಜಾರಾ ತೌಹೀಬ್ ಮೃತಪಟ್ಟ ಮಗು. ಶನಿವಾರ ಮಧ‍್ಯಾಹ್ನ ಮಹಮ್ಮದ್ ತೌಹೀಬ್ ತಮ್ಮ ಪತ್ನಿ ಹಾಗೂ ಪುತ್ರಿಯರೊಂದಿಗೆ ಆಲನಹಳ್ಳಿ ಸ್ಕೂಟರ್’ನಲ್ಲಿ ತೆರಳುತ್ತಿದ್ದಾಗ ರೇಸ್’ಕೋರ್ಸ್ ರಸ್ತೆ ಬದಿ ನಿಂತಿದ್ದ ಕಾರಿನ ಚಾಲಕ  ಒಮ್ಮೆಲೆ ತಿರುವು ಪಡೆದಿದ್ದಾನೆ. ಈ ವೇಳೆ ಕಾರು ಸ್ಕೂಟರ್’ಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಮಗು ಮೇಲೆ ಕಾರಿನ ಚಕ್ರ ಹರಿದು ಸ‍್ಥಳದಲ್ಲೇ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ದಾರ್ಥ ಸಂಚಾರಿಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

comments

Related Articles

error: