ಮೈಸೂರು

ಪ್ರತ್ಯೇಕ ಪ್ರಕರಣ : ಮೂವರ ಆತ್ಮಹತ್ಯೆ

ಮೈಸೂರು,ಏ.3:- ವಿವಿಧ ಕಾರಣಗಳಿಗಾಗಿ ಮೂವರು ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಪ್ರಥಮ ಬಿಎಸ್ಸಿ ಓದುತ್ತಿರುವ ವಿದ್ಯಾರಣ್ಯಪುರಣ ನಿವಾಸಿ ಝಾನ್ಸಿರಾಣಿ(19) ಎಂಬವರು ನಿದ್ದೆಮಾತ್ರೆ ಸೇವಿಸುವ ಮೂಲಕ ಸಾವಿಗೆ ಶರಣಾಗಿದ್ದಾರೆ. ಬಿಎಸ್ಸಿ ಯಲ್ಲಿನ ಪಾಠಗಳು ಟರ್ಥವಾಗದ ಕಾರಣ ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಾಹ ನಿಶ್ಚಯವಾಗಿದ್ದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳವಾಡಿಯಲ್ಲಿ ನಡೆದಿದೆ. ಬೆಳವಾಡಿ ನಿವಾಸಿ ರಾಜೇಶ್(25)ಇವರಿಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ವಿವಾಹ ನಿಶ್ಚಯವಾಗಿತ್ತು. ಪದೇ ಪದೇ ಹೊಟ್ಟೆನೋವು ಬರುತ್ತಿತ್ತು. ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ.ಆರ್.ಆಸ್ಪತ್ರೆಯಲ್ಲಿ ಪ್ರಯೋಗಾಲಯದಲ್ಲಿ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಪ್ರಭು (48)ಎಂದು ಗುರುತಿಸಲಾಗಿದೆ. ಇವರು ಬೋಗಾದಿಯಲ್ಲಿ ವಾಸವಿದ್ದರು. ಪತ್ನಿ ಮನೆಯಲ್ಲಿಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: