ಮೈಸೂರು

ಪರಿಸರ ಜಾಗೃತಿಯಾದರೆ ಪ್ರಕೃತಿಗೆ ಉಳಿಗಾಲ : ಮಹೇಶ್ ಕಾಮತ್

ಪರಿಸರದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡುವಂತಾದಾಗ ಮಾತ್ರ ಪ್ರಕೃತಿಗೆ ಉಳಿಗಾಲ ದೊರೆತಂತೆ ಎಂದು ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯ ಗೌರವ ಸಲಹೆಗಾರ ಮಹೇಶ್ ಕಾಮತ್ ಅವರು ಅಭಿಪ್ರಾಯ ಪಟ್ಟರು.

ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯ ರಮ್ಮನಹಳ್ಳಿ ಬಳಿಯ ಶಾರದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಕುರಿತಾದ 52 ನೇ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇಂದಿನ ಆಧುನಿಕತೆಯ ಭರಾಟೆಯಲ್ಲಿ ಕಲುಷಿತ ವಾತಾವರಣ ಏರ್ಪಡುತ್ತಿದ್ದು, ನಮ್ಮ ಸುಂದರ ಪರಿಸರ ವಿನಾಶದ ಅಂಚಿಗೆ  ತಲುಪುತ್ತಿದೆ. ಈ ನಿಟ್ಟಿನಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಸಾರ್ವಜನಿಕ ವಲಯದಲ್ಲಿ ಮೂಡಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮ.ನ.ಲತಾಮೋಹನ್ ಅವರು ಮಾತನಾಡಿ ಇಂದಿನ ಮಕ್ಕಳಲ್ಲಿ ಪರಿಸರ ಪ್ರೇಮ ವಿಶೇಷವಾಗಿದ್ದು, ಪರಿಸರದ ಬಗ್ಗೆ ಕಾಳಜಿ ಹುಟ್ಟುತ್ತಿರುವುದು ಸ್ವಾಗತಾರ್ಹ. ಮಕ್ಕಳು ತಮ್ಮ ಸುತ್ತಲ ಪರಿಸರದ ಸ್ವಚ್ಛತೆಗಾಗಿ, ಸುಂದರ ಪ್ರಕೃತಿಯ ಉಳಿವಿಗಾಗಿ ಸ್ವಪ್ರಯತ್ನದಿಂದ ತಮ್ಮದೇ ಆದ ರೀತಿಯಲ್ಲಿ ಮುಂದಾಗಿರುವುದು ಮೆಚ್ಚುವಂತಹ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ರಾಜ್ಯ ಸಂಚಾಲಕ ಟಿ.ಎಲ್.ಲೋಕೇಶ್, ಮಂಡ್ಯ ಜಿಲ್ಲಾಧ‍್ಯಕ್ಷ ಹನುಮೇಗೌಡ, ಸಾಗರ್, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಗುರುಪ್ರಸಾದ್ ಹೆಗಡೆ, ಮುಖ‍್ಯೋಪಾಧ‍್ಯಾಯ ಹೆಚ್.ಎಲ್.ಶಿವರಾಜು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಸಸಿಗಳನ್ನು ನೆಡಲಾಯಿತು ಹಾಗೂ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತಂತೆ ಭಾಷಣ ಹಾಗೂ ಕಿರು ನಾಟಕವನ್ನು ಪ್ರದರ್ಶಿಸಿದರು.

Leave a Reply

comments

Related Articles

error: