ಪ್ರಮುಖ ಸುದ್ದಿಮೈಸೂರು

ಜಾತಿ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ‘ಶಿವರಾಮೇಗೌಡನನ್ನು’ ಉಚ್ಚಾಟಿಸಿ : ಆಗ್ರಹ

ಮದುವೆ ನಂತರ ಸುಮಲತಾ 'ಗೌಡತಿ' : ಬಲಿಜ ಸಮಾಜದ ಘೋಷಣೆ

ಮೈಸೂರು,ಏ.3 : ರಾಜಕೀಯ ಮುಖಂಡರ ಸ್ವಪ್ರತಿಷ್ಠೆ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಗಳು ಮೇಲಗೈ ಸಾಧಿಸುತ್ತಿವೆ ಎಂಬುದು ಇಂದಿನ ಸುದ್ದಿಗೋಷ್ಠಿ ಪುರಾವೆಗೊಳಿಸಿತು.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಾಯ್ಡು ಜನಾಂಗಕ್ಕೆ ಸೇರಿದ್ದು ಮಂಡ್ಯ ಜನರನ್ನು ಮರಳು ಮಾಡಲು ಹೊರಟ್ಟಿದ್ದಾರೆ ಎಂದು ಹಾಲಿ ಸಂಸದ ಶಿವರಾಮೇಗೌಡ ಚುನಾವಣಾ ಪ್ರಚಾರದ ವೇಳೆ ನೀಡಿದ ಹೇಳಿಕೆಯನ್ನು ಮೈಸೂರು ಜಿಲ್ಲಾ ಬಲಿಜ (ನಾಯ್ಡು) ಸಮಾಜವು ತೀವ್ರವಾಗಿ ಖಂಡಿಸಿದ್ದ ಈ ಕೂಡಲೇ ಅವರು ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕೆಂದು ಸಂಘದ ಉಪಾಧ್ಯಕ್ಷ ಎಂ.ಡಿ.ಶ್ರಿನಿವಾಸ ಆಕ್ರೋಶವ್ಯಕ್ತಪಡಿಸಿದರು.

ಜಾತಿ ಹೆಸರಿನಲ್ಲಿ ಮತಯಾಚನೆ ಸಂವಿಧಾನ ವಿರೋಧಿಯಾಗಿದೆ, ಸೌಹಾರ್ದಯುತ ಚುನಾವಣಾ ನಡೆಸುವ ನಿಟ್ಟಿನಲ್ಲಿ  ಈ ಕೂಡಲೇ ಶಿವರಾಮೇಗೌಡರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಜೆಡಿಎಸ್ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.

ಕೂಡಗು ಘಟಕದ ಅಧ್ಯಕ್ಷ ಟಿ.ಎಲ್.ಶ್ರಿನಿವಾಸ್ ಅವರು ಮಾತನಾಡಿ, ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ಯಾವೊಬ್ಬ ಮಹಿಳೆ ತಾನು ವಿವಾಹವಾದ ಪತಿ ಜಾತಿಗೆ ಸೇರುತ್ತಾಳೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸಹಾ ಇದೇ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಸಮುದಾಯ ಎಂದೂ ಸಹಾ ಯಾವುದೇ ಜಾತಿಯನ್ನು ತೆಗಳುವ ಯತ್ನ ಮಾಡಿಲ್ಲ. ಹೀಗಿರುವಾಗ ಶಿವರಾಮೇಗೌಡರು ಸುಮಲತಾ ಹಾಗೂ ದರ್ಶನ್ ಮೊದಲಾದವರನ್ನು ಜಾತಿ ಹೆಸರಿನಲ್ಲಿ ನಿಂದಿಸುವುದು ತಕ್ಕುದಲ್ಲ ಎಂದು ಕಿಡಿಕಾರಿದರು.

ಸ್ಥಳೀಯವಾಗಿ ಒಕ್ಕಲಿಗರು ಹಾಗೂ ನಾವು ಸೋದರತ್ವದಲ್ಲಿ ಬದುಕುತ್ತಿದ್ದು ಚುನಾವಣೆಗಾಗಿ ಜಾತಿ ಹೆಸರಲ್ಲಿ ರಾಜಕಾರಣದ ವಿಷಬೀಜ ಬಿತ್ತುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ಶಿವರಾಮೇಗೌಡರಂತವರ ಬಗ್ಗೆ ಸಮಾಜ ಎಚ್ಚರಿಕೆಯಿಂದಿರಬೇಕು, ಸುಮಲತಾ ನಾಯ್ಡು ಆಗಿದ್ದರು ಈಗ ಗೌಡತಿಯೇ ಆ ಬಗ್ಗೆ ಗೊಂದಲ ಮತದಾರರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿರುವುದು ಖಂಡನೀಯ

ಹೇಳಿಕೆ ಹಿಂಪಡೆಯಲು ಅವಕಾಶ ನೀಡಲಿದ್ದು, ಸಮಾಜದ ಕ್ಷಮೆಯಾಚಿಸದೇ ಹೋದಲ್ಲಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

ಸಮಾಜದ ಮುಖಂಡರಾದ ಹರೀಶ್, ಡಾ.ಆರ್.ಮಂಜುನಾಥ್, ಜಿ.ವೈ.ಶಿವಕುಮಾರ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: