ಕರ್ನಾಟಕ

ಯಲಹಂಕ ವಾಯುನೆಲೆ ಬಳಿ ಮೂಳೆ ಪುಡಿ ಘಟಕ ಸ್ಥಗಿತಕ್ಕೆ ಸೂಚನೆ

ಬೆಂಗಳೂರು (ಏ.3): ಏರೋ ಇಂಡಿಯಾ ಪ್ರದರ್ಶನ ಸಂದರ್ಭದಲ್ಲಿ ಯುದ್ಧ ವಿಮಾನ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ವಾಯುಸೇನೆಯು ಹೊಸ ರಕ್ಷಣಾ ಕ್ರಮಕ್ಕೆ ಮುಂದಾಗಿದೆ. ಯಲಹಂಕ ವಾಯುನೆಲೆಯ ಸುತ್ತಮುತ್ತಲಿನ ರಜಾಕ್ ಪಾಳ್ಯ ಇನ್ನಿತರೆ 10 ಕಿ.ಮೀ ವ್ಯಾಪ್ತಿಯಲ್ಲಿ ಪ್ರಾಣಿಗಳ ಮೂಳೆ ಪುಡಿ ಮಾಡುವ ಘಟಕ ಹಾಗೂ ಕಸಾಯಿಖಾನೆಗಳನ್ನು ಕೂಡಲೇ ಮುಚ್ಚುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರಾಣಿಗಳ ಮೂಳೆ ಸಂಸ್ಕರಣೆ ಇನ್ನಿತರೆ ಘಟಕಗಳ ಬಳಿಯಿಂದ ಹದ್ದು ಹಾಗೂ ಇನ್ನಿತರೆ ಹಕ್ಕಿಗಳು ವಾಯುನೆಲೆಯ ಸುತ್ತಲೂ ಬರುತ್ತಿವೆ. ಈ ಹಕ್ಕಿ ಯುದ್ಧ ವಿಮಾನಕ್ಕೆ ಬಡಿದಾಗ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಗಳಿಂದ ಕೂಡಲೇ ಇವುಗಳನ್ನು ಮುಚ್ಚಿಸಲು ಸೂಚನೆ ನೀಡಲಾಗಿದೆ. (ಎನ್.ಬಿ)

Leave a Reply

comments

Related Articles

error: