ಸುದ್ದಿ ಸಂಕ್ಷಿಪ್ತ

ಪ್ರಶಸ್ತಿ ಪ್ರದಾನ ಸಮಾರಂಭ

ಸ್ನೇಹ ಸಿಂಚನ ಟ್ರಸ್ಟ್ ವತಿಯಿಂದ ಫೆ.5 ರಂದು ಸಂಜೆ 4 ಗಂಟೆಗೆ ಜೆ.ಎಸ್.ಎಸ್ ಆಸ್ಪತ್ರೆ ಆವರಣದಲ್ಲಿರುವ ಜೆ.ಎಸ್.ಎಸ್ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಸಮಾಜದ ವಿಶೇಷ ಗಣ‍್ಯರಿಗೆ ಸಮಾಜ ಸೇವಾರತ್ನ ಹಾಗೂ ಮೈಸೂರು ರತ್ನ ಪ್ರಶಸ್ತಿ-2016 ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಸಮಾಜ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು : ಡಾ.ಬಿ.ವಿ.ಶೇಷಾದರಿ ಪಶ್ಚಿಮ ವಾಹಿನಿ, ಕೆ,ರಘುರಾಮ ವಾಜಪೇಯಿ, ಹೆಚ್.ವಿ.ರಾಜೀವ್, ಟಿ. ಮಹದೇವಸ್ವಾಮಿ, ಮಡ್ಡೀಕೆರೆ ಗೋಪಾಲ್.

ಮೈಸೂರು ರತ್ನ ಪ್ರಶಸ್ತಿ ಪುರಸ್ಕೃತರು : ಎಸ್.ಅಶ್ವಿನ್ (ಕೌಟಿಲ್ಯ ವಿದ್ಯಾಶಾಲೆ), ಎಲ್.ಪ್ರಜ್ವಲ್(ಅನುಷ ವಿದ್ಯಾಶಾಲೆ), ಪಿ.ಯಶ್ವಂತ್(ಮಹರ್ಷಿ ಪಬ್ಲಿಕ್ ಶಾಲೆ), ಅರ್ಜುನ್ ಆರ್.ಗೌಡ(ಪ್ರೆಸೆಂಟೇಷನ್ ಪಬ್ಲಿಕ್ ಶಾಲೆ), ವಿ.ವಿಘ್ನೇಶ್(ಸೇಂಟ್ ಜೋಸೆಫ್ ಪ್ರಾಥಮಿಕ ಶಾಲೆ), ಯಶಸ್ವಿನಿ (ಡಿ.ಪಾಲ್ ಪಬ್ಲಿಕ್ ಶಾಲೆ) ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇದೇ ಸಂದರ್ಭದಲ್ಲಿ ನವರಾತ್ರಿ ಗೊಂಬೆ ಸ್ಪರ್ಧೆ, ಭಾವಗೀತೆ, ಜನಪದಗೀತೆ, ನಾಡಗೀತೆ, ಅಂದದ ಬರವಣಿಗೆ ಹಾಗೂ ಚಿತ್ರಕಲಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆಯನ್ನು ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ನ ಪ್ರಶಸ್ತಿ ಆಯ್ಕೆ ಸಮಿತಿಯ ಕಾರ್ಯದರ್ಶಿ ಎಂ.ಬಿ.ಸಂತೋಷ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: