ದೇಶಪ್ರಮುಖ ಸುದ್ದಿ

ಸಿಆರ್‌ಪಿಎಫ್‌ ಶಿಬಿರದ ಮೇಲೆ ದಾಳಿ ಮಾಡಿದ್ದ ಉಗ್ರನನ್ನು ಭಾರತಕ್ಕೆ ಹಸ್ತಾಂತರಿಸಿದ ಯುಎಇ

ನವದೆಹಲಿ (ಏ.3): ಸಿಆರ್‍ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿ ಐವರು ಯೋಧರನ್ನು ಹತ್ಯೆ ಮಾಡಿದ್ದ ಜೈಷ್-ಎ-ಮಹಮದ್(ಜೆಇಎಂ) ಭಯೋತ್ಪಾದನೆ ಸಂಘಟನೆಯ ಕುಪ್ರಸಿದ್ದ ಉಗ್ರಗಾಮಿ ನಿಸಾರ್ ಅಹಮದ್ ತಂತ್ರೆಯನ್ನು ಸಂಯುಕ್ತ ಅರಬ್ ಗಣರಾಜ್ಯ-ಯುಎಇ ಯಿಂದ ತನ್ನ ವಶಕ್ಕೆ ಪಡೆಯುವಲ್ಲಿ ಭಾರತ ಯಶಸ್ವಿಯಾಗಿದೆ.

ದಕ್ಷಿಣ ಕಾಶ್ಮೀರದ ಜೈಷ್ ಭಾಗೀಯ ಕಮ್ಯಾಂಡರ್ ಮತ್ತು ಭಯೋತ್ಪಾದಕ ನೂರ್ ತಂತ್ರೆ ಸಹೋದರನಾದ ನಿಸಾರ್‍ನನ್ನು ಯುಎಇನಿಂದ ಶೇಷ ಮಾನದಲ್ಲಿ ಭಾರತಕ್ಕೆ ಕರೆತಂದು ರಾಷ್ಟ್ರೀಯ ತನಿಖಾ ಸಂಸ್ಥೆ -ಎನ್‍ಎಐ ವಶಕ್ಕೆ ಒಪ್ಪಿಸಲಾಗಿದೆ.

ನಿಸಾರ್ ಸಹೋದರ ನೂರ್‍ನನ್ನು 2017ರಲ್ಲಿ ಯೋಧರು ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸಿದ್ದರು. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಲೆಥ್‍ಪೊರಾದ ಸಿಆರ್‍ಪಿಎಫ್ ಶಿಬಿರದ ಮೇಲೆ ಡಿಸೆಂಬರ್ 30ರಂದು ಮಧ್ಯರಾತ್ರಿ ನಡೆದ ಉಗ್ರರ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ನಂತರ ನಡೆದ ಗುಂಡಿನ ಕಾಳಗದಲ್ಲಿ ಮೂವರು ಜೈಷ್ ಉಗ್ರರೂ ಹತರಾಗಿದ್ದರು. ಸಿಆರ್‍ಪಿಎಫ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ನಿಸಾರ್ ಮುಖ್ಯ ಸಂಚುಕೋರನಾಗಿದ್ದ ಎಂಬ ಆರೋಪವಿದೆ.

ಎನ್‍ಐಎ ನ್ಯಾಯಾಲಯದ ಶೇಷ ನ್ಯಾಯಾಧೀಶರೊಬ್ಬರು ಜೈಷ್ ಭಯೋತ್ಪಾದಕ ನಿಸಾರ್ ಹಸ್ತಾಂತರ ಸಂಬಂಧ ಬಂಧನ ವಾರೆಂಟ್ ಹೊರಡಿಸಿದ್ದರು. ನಂತರ ನಡೆದ ಕಾನೂನು ಪ್ರಕ್ರಿಯೆಗಳ ನಂತರ ಕುಖ್ಯಾತ ಉಗ್ರನನ್ನು ಯುಎಇ ಭಾರತದ ವಶಕ್ಕೆ ನೀಡಿದೆ. ನಿಸಾರ್ ಹಲವು ಭಯೋತ್ಪಾದನೆ ಚಟುವಟಿಕೆಗಳು ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಶಾಮೀಲಾಗಿದ್ದಾನೆ. ಯುಎಇ ನಲ್ಲಿದ್ದುಕೊಂಡೇ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರಿಗೆ ಬೆಂಬಲ ನೀಡುತ್ತಿದ್ದ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: