ಮೈಸೂರು

ಮಹದೇವಪ್ಪನವರ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಂಸದ ಆರ್.ಧೃವನಾರಾಯಣ್

ಕಳೆದ ವರ್ಷ ಕೇಂದ್ರದ 1542 ಕೋಟಿ ರೂ. ಬರಪರಿಹಾರದ ಹಣ ಸಂಪೂರ್ಣವಾಗಿ ವಿತರಿಸಲಾಗಿದೆ ಎಂದು ಚಾಮರಾಜನಗರ ಸಂಸದ ಆರ್.ಧೃವನಾರಾಯಣ್ ಹೇಳಿದ್ದಾರೆ.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಹಾರದ ಹಣ 30 ಲಕ್ಷ ರೈತರ ಅಕೌಂಟ್‌ಗೆ ಆರ್.ಟಿ.ಜಿ.ಎಸ್. ಮೂಲಕ ಹಂಚಿಕೆಯಾಗಿದೆ. ಹಿಂಗಾರಿನಲ್ಲೂ 11 ಲಕ್ಷ ರೈತರ ಅಕೌಂಟ್‌ಗೆ ಹಣ ತಲುಪಿದೆ. ದೇಶದ ಯಾವುದೇ ಬರಪಿಡಿತ ರಾಜ್ಯದಲ್ಲಿ ಕರ್ನಾಟಕದಷ್ಟು ಪ್ರಮಾಣಿಕವಾಗಿ ಹಣ ಹಂಚಿಕೆಯಾಗಿಲ್ಲ ಎಂದರು.

ಮಹಾರಾಷ್ಟ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಈಗಾಗಲೇ ತಾರತಮ್ಯ ಎಂದು ಆರೋಪಸಿದ ಅವರು, ಈ ವರ್ಷದ ಮುಂಗಾರು ಮಳೆ ಅನುದಾನವನ್ನು ತತಕ್ಷಣ ಬಿಡುಗಡೆ ಮಾಡಬೇಕು‌. ಕೆಲ ಬಿಜೆಪಿ ನಾಯಕರು ಹಣ ಸದ್ಬಳಕೆ ಮಾಡಿಲ್ಲ ಎಂದು ಆರೋಪಿಸಿದ್ದರು. ಅವೆಲ್ಲ ಆಧಾರ ರಹಿತ ಆರೋಪವಾಗಿದೆ. ಕೇಂದ್ರದಿಂದ ಹಣ ಬಾರದೆ ಇದ್ದುದ್ದಕ್ಕೆ ರಾಜ್ಯಸರ್ಕಾರವೇ ಹಣ ಖರ್ಚು ಮಾಡುತ್ತಿದ್ದೆ ಎಂದು ವಿವರಿಸಿದರು.

ನನ್ನ ಹಾಗೂ ಮಹದೇವಪ್ಪನವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಂಸದ ಆರ್.ಧೃವನಾರಾಯಣ್ ಅವರು ಸ್ಪಷ್ಟನೆ ನೀಡಿದರು.

ನಂಜನಗೂಡಿಗೆ ಇನ್ನು ಚುನಾವಣೆ ಘೋಷಣೆಯಾಗಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ಎಲ್ಲರ ಒಟ್ಟಾಗಿ ಕೆಲಸ ಮಾಡುತ್ತೇವೆ. ಕಳಲೆ‌ ಕೇಶವಮೂರ್ತಿಯವರನ್ನು ಕಾಂಗ್ರೆಸ್ ಕರೆತರಲು ಪ್ರಯತ್ನ ನಡೆದಿರಬಹುದು. ಮಹದೇವಪ್ಪ ನಾವು ಎಲ್ಲರು ಒಟ್ಟಾಗಿ ಕೆಲಸ ಮಾಡಲು ಸಿದ್ದರಿದ್ದೇವೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದರು.

ಗುಂಡ್ಲುಪೇಟೆಯ ಅಭ್ಯರ್ಥಿ ಆಯ್ಕೆ ವಿಚಾರ ಪಕ್ಷಕ್ಕೆ ಬಿಟ್ಟದ್ದು. ನನ್ನ ವೈಯಕ್ತಿಕ ಅಭಿಪ್ರಾಯ ಮಹದೇವಪ್ರಸಾದ್ ಪತ್ನಿ ಡಾ.ಗೀತಾ ಅವರಿಗೆ ಟಿಕೇಟ್ ನೀಡಿದರೆ ಉತ್ತಮ ಎಂದು ಪುನರುಚ್ಚರಿಸಿದರು.

Leave a Reply

comments

Related Articles

error: