ಪ್ರಮುಖ ಸುದ್ದಿ

ಹಾಕತ್ತೂರು-ಬಿಳಿಗೇರಿ ಮಖಾಂ ಉರೂಸ್‍ಗೆ ಏ.7 ರಂದು ಚಾಲನೆ

ರಾಜ್ಯ(ಮಡಿಕೇರಿ) ಏ.3 :- ಹಲವಾರು ಪವಾಡಗಳಿಂದ ಪ್ರಸಿದ್ಧವಾಗಿರುವ ಮಡಿಕೇರಿ ಸಮೀಪದ ಬಿಳಿಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಫಕೀರ್ ಭಾವ ಶಾ ವಲಿಯುಲ್ಲಾಹ್ ಅವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಹಾಕತ್ತೂರು-ಬಿಳಿಗೇರಿ ಮಖಾಂ ಉರೂಸ್ ಏ.7, 8 ಮತ್ತು 9 ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಕತ್ತೂರು- ಬಿಳಿಗೇರಿ ಬದ್ರಿಯಾ ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಖಾಲೀದ್, ಉರೂಸ್ ಕಾರ್ಯಕ್ರಮದ ಅಂಗವಾಗಿ ದಿಕ್ರಹಲ್ಕ, ದುಹಾ ಮಜ್ಲಿಸ್ ಮೌಲೂದ್ ಪಾರಾಯಣ ಹಾಗೂ ಮತ ಪ್ರವಚನ ನಡೆಯಲಿದೆ ಎಂದರು.  ಏ.7 ರಂದು ಹಾಕತ್ತೂರಿನ ಬದರ್ ಜಮಾಅತ್‍ನ ಅಧ್ಯಕ್ಷರಾದ ಪಿ.ಎಂ. ಅಬ್ದುಲ್ಲ ಅವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದ್ದು, ಮಗ್‍ರಿಭ್ ನಮಾಜ್ ನಂತರ ಜಮ್ಮಾ ಮಸೀದಿಯ ಖತೀಬರು ಹನೀಫ್ ಸಖಾಫಿ ಹಳ್ಳಿಗಟ್ಟು ಅವರ ನೇತೃತ್ವದಲ್ಲಿ 7 ಗಂಟೆಗೆ ಮಖಾಂ ಅಲಂಕಾರ ಮತ್ತು ಝಿಯಾರತ್ ನಡೆಯಲಿದೆ. ಅಲ್ಲದೆ ಅಂದು ರಾತ್ರಿ 8 ಗಂಟೆಗೆ ಸಯ್ಯದ್ ಯಹ್ಯಾ ಆಟ ಕೋಯ ತಂಙಳ್ ಆರಳಂ ಅವರ ನೇತೃತ್ವದಲ್ಲಿ ದಿಕ್ರ್‍ಹಲ್ಕ ಮತ್ತು ದುಹಾ ಮಜ್ಲಿಸ್ ನಡೆಯಲಿದೆ.

ರಾತ್ರಿ 9 ಗಂಟೆಗೆ ಹಾಕತ್ತೂರಿನ ಜಮ್ಮಾ ಮಸೀದಿಯ ಖತೀಬರಾದ ಹನೀಫ್ ಸಖಾಫಿ ಅವರಿಂದ “ಯುವಾಕ್ಕಳ್ ನಾಶತ್ತಿಲೇಕೋ” ಎಂಬ ವಿಷಯದ ಕುರಿತು ಮತ ಪ್ರಸಂಗ ಗಮನ ಸೆಳೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಹಾಕತ್ತೂರಿನ ಮಹಲ್ಲಿಂ ಜಯಾತುಲ್ ಇಸ್ಲಾಂ ಮದ್ರಸದ  ಬಹು ಅಬ್ದುಲ್ ಸಮದ್ ಸಖಾಫಿ ನೇರವೇರಿಸಲಿದ್ದಾರೆ.

ಏ.8 ರಂದು ಅಪರಾಹ್ನ 3 ಗಂಟೆಗೆ ಮೌಲೂದ್ ಪಾರಾಯಣ ಮತ್ತು ಸಂಜೆ 5 ಗಂಟೆಗೆ ಅನ್ನದಾನ ನಡೆಯಲಿದೆ. ಅಂದು ರಾತ್ರಿ 8 ಗಂಟೆಗೆ  ಅಬ್ದುಲ್ ಹಮೀದ್ ಪೈಝಿ, “ಅಧಃಪತನದತ್ತ ಕುಟುಂಬ ಜೀವನ” ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ತೊಂಭತ್ತುಮನೆ ಹಯಾತುಲ್ ಇಸ್ಲಾಂ ಮುದ್ರಸ್‍ನ ಮಹಮ್ಮದ್ ಮುಸ್ಲಿಯಾರ್ ನೆರವೆರಿಸಲಿದ್ದಾರೆ ಎಂದು ಖಾಲೀದ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಪಿ.ಎಂ.ಅಬ್ದುಲ್ಲಾ, ಸಹ ಕಾರ್ಯದರ್ಶಿ ಪಿ.ಎಂ.ಹಂಸ ಹಾಗೂ ಸದಸ್ಯ ಕೆ.ಎಂ.ಖಾಸಿಂ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: