ಮೈಸೂರು

 ಚಾಮುಂಡಿ ಬೆಟ್ಟದ ದೇವಾಲಯದ ಆದಾಯದಲ್ಲಿ ನಾಲ್ಕು ಕೋಟಿ ಹೆಚ್ಚಳ

ಮೈಸೂರು,ಏ.4:- ಸಾಂಸ್ಕೃತಿಕ ನಗರಿ ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ವರ್ಷದಿಂದ ವರ್ಷಕ್ಕೆ ಶ್ರೀಮಂತಳಾಗುತ್ತಿದ್ದಾಳೆ.   ಚಾಮುಂಡಿ ಬೆಟ್ಟದ ದೇವಾಲಯದ ಆದಾಯದಲ್ಲಿ ಹೆಚ್ಚಳವಾಗಿದೆ.

ಚಾಮುಂಡಿ ಬೆಟ್ಟದ ಆದಾಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಾಲ್ಕು ಕೋಟಿ ಹೆಚ್ಚಳವಾಗಿದೆ. ಈ ಬಗ್ಗೆ ಚಾಮುಂಡಿ ಬೆಟ್ಟದ ಆಡಳಿತ ಮಂಡಳಿ ಅಧಿಕೃತವಾಗಿ ಘೋಷಣೆ ಮಾಡಿದೆ.  2017-18ಸಾಲಿನಲ್ಲಿ 29,95,17,646 ರಷ್ಟಿದ್ದ ಆದಾಯ ಈ ಬಾರಿ ಮತ್ತಷ್ಟು ಏರಿಕೆಯಾಗಿದೆ.

ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಹೀಗಾಗಿ 2018-19 ಸಾಲಿನಲ್ಲಿ 33,30,68,162  ರೂ ಆದಾಯವಾಗಿದ್ದು, ಕಳೆದ ಐದು ವರ್ಷಗಳಲ್ಲಿ ದೇವಾಲಯದ ಆದಾಯ ಏರಿಯಾಗುತ್ತಿದೆ. ಆದಾಯ ಹೆಚ್ಚಳ ಹಿನ್ನೆಲೆ ಎಫ್ ಡಿ ಹಣ ಕೂಡ ಹೆಚ್ಚಳವಾಗಿದ್ದು, ದೇವಸ್ಥಾನ ಆಡಳಿತ ಮಂಡಳಿ ಮೂರು ಕೋಟಿ ಹಣ ಎಫ್ ಡಿ ಇಟ್ಟಿದೆ. ವಿಶೇಷ ಪೂಜೆ, ಹುಂಡಿ ಹಾಗೂ ಇತರ ಮೂಲಗಳಿಂದ ದೇವಾಲಯಕ್ಕೆ ಹಣ ಹರಿದು ಬರುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: