ಕರ್ನಾಟಕ

ಏ.10ರಿಂದ ಮತದಾರರಲ್ಲಿ ಜಾಗೃತಿ ಮೂಡಿಸಲಿರುವ ಚಂದನ್ ಶೆಟ್ಟಿ

ಹಾಸನ (ಏ.4): ಬಿಗ್‍ಬಾಸ್ ವಿಜೇತ ಚಂದನ್ ಶೆಟ್ಟಿ ಏ.10ರಿಂದ ಮೂರು ದಿನಗಳ ಕಾಲ ಹಾಸನ ಜಿಲ್ಲೆಯಲ್ಲಿ ಮತದಾರರ ಜಾಗೃತಿ ಚಟುವಟಿಕೆಗಳನ್ನು ನಡೆಸಲಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರಕ್ಕೆ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ರಾಯಭಾರಿಯಾಗಿ ನೇಮಕಗೊಂಡಿರುವ ಚಂದನ್ ಶೆಟ್ಟಿ ಹಾಸನ ನಗರ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಡಾ.ಕೆ.ಎನ್ ವಿಜಯ್ ಪ್ರಕಾಶ್ ಮಾಹಿತಿ ನೀಡಿದ್ದಾರೆ.

ಸ್ವೀಪ್ ಚಟುವಟಿಕೆಗಳ ಸಂಘಟನೆ ಕುರಿತಂತೆ ತಮ್ಮ ಕಚೇರಿಯಲ್ಲಿ ಬುಧವಾರ, ಅಧಿಕಾರಿಗಳು ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರ ಸಭೆ ನಡೆಸಿದ ಅವರು ಚಂದನ್ ಶೆಟ್ಟಿಯವರ ಕಾರ್ಯಕ್ರಮಗಳ ಸಿದ್ದತೆಗಳ ಕುರಿತು ನಿರ್ದೇಶನ ನೀಡಿದರು. ಚಂದನ್‍ಶೆಟ್ಟಿ ಅವರು ತಮ್ಮ ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಮತದಾರರ ಜಾಗೃತಿಗಾಗಿ ಮೂರು ದಿನಗಳು ತೊಡಗಲಿದ್ದಾರೆ. ಅದಕ್ಕೆ ಅನುಗುಣವಾಗಿ ಎಲ್ಲಾ ರೀತಿಯ ಮತದಾರರ ಮೇಲೂ ಪ್ರಭಾವ ಬೀರುವಂತಹ ಕಾರ್ಯಕ್ರಮಗಳನ್ನು ಸಂಘಟಿಸಬೇಕಿದೆ ಎಂದು ಹೇಳಿದರು.

ಈ ಬಾರಿ ಶೇ.100 ರಷ್ಟು ಮತದಾನವಾಗಬೇಕೆಂಬುದು ಸ್ವೀಪ್ ಸಮಿತಿಯ ಗುರಿ ಅದಕ್ಕೆ ಎಲ್ಲಾ ವರ್ಗದ ಜನರಲ್ಲಿ ಮತದಾನದ ಮಹತ್ವದ ಬಗ್ಗೆ ತಿಳಿಸಿ ನೈತಿಕ ಮತದಾನಕ್ಕೆ ಪ್ರೆರೆಪಿಸಬೇಕಿದೆ ಎಂದು ಸ್ವೀಪ್ ಸಮಿತಿಯ ಅಧ್ಯಕ್ಷರಾದ ಡಾ.ಕೆ.ಎನ್.ವಿಜಯ್ ಪ್ರಕಾಶ್ ತಿಳಿಸಿದರು. ಏ.10 ರಂದು ಹಾಸನ ನಗರದಲ್ಲಿ ಯುವ ಸಮುದಾಯದೊಂದಿಗೆ ಜಾಥಾ ಎಲ್ಲಾ ವರ್ಗದ ಮಹಿಳೆಯರನ್ನು ಒಳಗೊಂಡ ಸಮಾರಂಭ. ವಿಕಲ ಚೇತನರ ಜಾಗೃತಿ ಕಾರ್ಯಕ್ರಮ ಮತ್ತು ಬೈಕ್ ಜಾಥಾ ನಡೆಯಲಿದೆ.

ಸಕಲೇಶಪುರದಲ್ಲಿ ವಿಂಟೇಜ್ ಕಾರ್ ರ್ಯಾಲಿ, ಕಾಫಿ ತೋಟದ ಕಾರ್ಮಿಕರಿಗೆ ಮತದಾನ ಜಾಗೃತಿಗಾಗಿ ಕಾರ್ಯಕ್ರಮ ನಡೆಯಲಿದೆ. ಇದಲ್ಲದೆ ವಿವಿಧ ತಾಲ್ಲೂಕುಗಳಲ್ಲಿ ಯುವ ಮತದಾರರನ್ನು ಪ್ರೆರೆಪಿಸುವ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕೆ ಎಲ್ಲಾ ಇಲಾಖಾ ಅಧಿಕಾರಿಗಳು ಅಗತ್ಯ ಸಿದ್ದತೆ ನಡೆಸಬೇಕು ಎಂದು .ವಿಜಯ್ ಪ್ರಕಾಶ್‍ಅವರು ತಿಳಿಸಿದರು.

ಸಭೆಯಲ್ಲಿ ಹಿಮ್ಸ್‍ನ ನಿರ್ದೇಶಕರಾದ ಡಾ.ರವಿಕುಮಾರ್ ಬಿ.ಸಿ, ಪ್ರಭಾರ ಯೋಜನ ನಿರ್ದೇಶಕರಾದ ಲಕ್ಷ್ಮೀ ಪಿ, ಸ್ವೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳಾದ ವಿನೋದ್ ಚಂದ್ರ, ಸಹಾಯಕ ಯೋಜನಾಧಿಕಾರಿ ಸುದರ್ಶನ್, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ರಾಜಪ್ಪ, ಎ.ಪಿ.ಒ, ಕೆ.ಆರ್. ಬಾನವಳಿಕರ್ ಮತ್ತಿತರರು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: