
ಕರ್ನಾಟಕ
ಬೆಳಗಾವಿ: ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ವರ ಸಾವು
ಬೆಳಗಾವಿ,ಏ.4- ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ರೇವಪ್ಪ ಕಲ್ಲೋಳಿ (35), ರತ್ನವ್ವ ಕಲ್ಲೋಳಿ (30), ಪುತ್ರ ಸಚಿನ್ (8) ಹಾಗೂ ರೇವಪ್ಪನ ಅಣ್ಣನ ಮಗ ಮೃತರು. ಘಟನೆಯಲ್ಲಿ ರೇವಪ್ಪ ಅವರ ಎರಡು ಎತ್ತುಗಳೂ ಸಾವಿಗೀಡಾಗಿವೆ.
ರಾತ್ರಿ ಸುರಿದ ಗಾಳಿ ಮಳೆಗೆ ಇವರ ಹೊಲದ ದಾರಿಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಬೆಳಿಗ್ಗೆ ಹೊಲಕ್ಕೆ ತೆರಳುವಾಗ ಕುಟುಂಬದವರು ಇದನ್ನು ಗಮನಿಸದೆ ತಂತಿ ಮೇಲೆ ನಡೆದಿದ್ದಾರೆ. ಇದರಿಂದ ಈ ದುರ್ಘಟನೆ ಸಂಭವಿಸಿದೆ.
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಆರೋಪಿಸಲಾಗಿದೆ.ಜನರು ಕಂಬಗಳನ್ನು ಸರಿಪಡಿಸಲು ಮನವಿ ಮಾಡಿದರು ಅಸಡ್ಡೆ ತೋರಿದ್ದರು ಎಂದು ಆರೋಪಿಸಲಾಗಿದೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಂ.ಎನ್)