ಸುದ್ದಿ ಸಂಕ್ಷಿಪ್ತ

ನಿಸರ್ಗ ಚಿತ್ರಕಲಾ ಪ್ರದರ್ಶನ :ಜ.30 ರಿಂದ

ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಮೂಲತರಗತಿ ವಿದ್ಯಾರ್ಥಿಗಳು ರಚಿಸಲಾದ ನಿಸರ್ಗ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮವನ್ನು ಜ.30 ರಂದು ಬೆ.10.30 ಕ್ಕೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ‍್ಳಲಾಗಿದೆ. ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಹಂಪಿ, ವಿರೂಪಾಕ್ಷ ದೇವಸ್ಥಾನ, ಮಹಾಕೂಟ ದೇವಾಲಯ, ಸಾಸಿವೆ ಕಾಳು ಗಣೇಶ, ಕೃಷ್ಣ ದೇವಾಲಯ, ಮಹಾನವಮಿ ದಿಬ್ಬ, ಕಮಲ್ ಮಹಲ್, ವಿಜಯ ವಿಠಲ ದೇವಾಲಯ, ಆನೆಗುಂದಿ, ಬೀದರ್ ಕೋಟೆ, ನರಸಿಂಹ ಝರನಾ, ರಂಗಿನ ಮಹಲ್, ಬಹಮುನಿ ಟೋಂಬ್ಸ್, ಬಸವಕಲ್ಯಾಣ, ಕಲಬುರಗಿ, ಕಾಳಗಿ ಇನ್ನೂ ಮೊದಲಾದ ಸ‍್ಥಳಗಳ ಚಿತ್ರಕಲೆಯನ್ನು ಬಿಡಿಸಲಾಗಿದೆ. ಜ.30 ರಿಂದ ಫೆ.2 ರವರೆಗೆ ಬೆ.10 ಗಂಟೆಯಿಂದ ಸಂಜೆ 5 ರವರೆಗೆ ಚಿತ್ರಕಲಾ ಪ್ರದರ್ಶನವಿರುತ್ತದೆ.

Leave a Reply

comments

Related Articles

error: