ಮೈಸೂರು

ಉಂಡಬತ್ತಿನ ಕೆರೆ ಪ್ರಕರಣ ಹಿಂಪಡೆದ ಸರ್ಕಾರದ ಕ್ರಮ ಸ್ವಾಗತಾರ್ಹ : ಕಳಕೊಳ ಕುಮಾರಸ್ವಾಮಿ

ಉಂಡಬತ್ತಿನ ಕೆರೆ ಪ್ರಕರಣದ ಮೊಕದ್ದಮೆಯನ್ನು ಸರ್ಕಾರ ಹಿಂಪಡೆದಿರುವ ಕ್ರಮವನ್ನು ಸ್ವಾಗತಿಸಿದ ಕಡಕೊಳ ಕನ್ನಡ ಗೆಳೆಯರ ಬಳಗದ ಸಂಚಾಲಕ ಕಡಕೊಳ ಕುಮಾರಸ್ವಾಮಿ ಅವರು ಹರ್ಷ ವ್ಯಕ್ತಪಡಿಸಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಕಳೆದ 2010ರ ಡಿ.14ರಂದು ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣವನ್ನಪ್ಪಿದವರಿಗೆ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ವಿನಾಕಾರಣ ಅಮಾಯಕರ ಮೇಲೆ ಲಾಠಿ ಚಾರ್ಜ್ ನಡೆಸಿ ಪ್ರಕರಣ ದಾಖಲಿಸಿತ್ತು.

ಅಂದು ನಡೆದ ಅಪಘಾತದಲ್ಲಿ 31 ಜನರನ್ನು ಬಲಿಪಡೆದಿದ್ದು ಇದರಿಂದ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯು ಏಕಾಏಕಿ ವಿಕೋಪಕ್ಕೆ ತಿರುಗಿ ಕೂಲಿಕಾರ್ಮಿಕರು ಸೇರಿದಂತೆ ಇತರರ ಮೇಲೆ ಲಾಠಿ ಚಾರ್ಚ್ ನಡೆಸಿ ಅಮಾಯಕ 10 ಜನ ಹೋರಾಟಗಾರರನ್ನು ಬಂಧಿಸಲಾಗಿತ್ತು. ಹಾಗೂ 7 5 ಜನರ ವಿರುದ್ಧ ಮೊಕದ್ದಮೆ ದಾಖಲಿಸಿ ಬದುಕಿನ ನೆಮ್ಮದಿಯನ್ನು ಕಿತ್ತುಕೊಂಡಿತ್ತು,

ಹೋರಾಟದ ಫಲವಾಗಿ ಮೈಸೂರು ಮತ್ತು ನಂಜನಗೂಡು ರಸ್ತೆ ಅಗಲೀಕರಣ ಹಾಗೂ ಕರೆಗಳಿಗೆ ತಡೆಗೋಡೆಯನ್ನು ನಿರ್ಮಿಸಲಾಗಿದ್ದು, ಸರ್ಕಾರದ ಸಮಯೋಚಿತ ಕ್ರಮವನ್ನು ಶ್ಲಾಘಿಸಿ ಹೋರಾಟಗಾರರ ಎಲ್ಲ ಪ್ರಕರಣಗಳನ್ನೂ ಹಿಂಪಡೆದಿರುವುದು ಸ್ವಾಗತಾರ್ಹವೆಂದರು. ಪ್ರಸ್ತುತ ರೈತರ ಮೇಲಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆದು ನ್ಯಾಯಯುತ ಹೋರಾಟಗಳಿಗೆ ನೈತಿಕ ಬೆಂಬಲ ನೀಡಬೇಕೆಂದು ಒತ್ತಾಯಿಸಿದರು.

ಅಧ್ಯಕ್ಷ ಸ್ವಾಮಿನಾಯಕ್, ಸಂಘಟನಾ ಕಾರ್ಯದರ್ಶಿ ಎಸ್.ನಟರಾಜ್, ಮಾಜಿ ಅಧ್ಯಕ್ಷ ಪುಟ್ಟಮಾದು, ಖಜಾಂಚಿ ಹಾಗೂ ತಾ.ಪಂ.ಸದಸ್ಯ ಶ್ರೀಕಂಠ ತೋಂಡೇಗೌಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: