ಕರ್ನಾಟಕ

ಬೆಂಗಳೂರಿನ ಗ್ರಾಫೈಟ್ ಇಂಡಿಯಾ ಲಿ. ಮುಚ್ಚಲು ಆದೇಶ: ಮಾಲಿನ್ಯದ ವಿರುದ್ಧ ಜನರ ಗೆಲುವು

ಬೆಂಗಳೂರು (ಏ.4): ಬೆಂಗಳೂರು ನಗರದ ವೈಟ್‌ಫೀಲ್ಡ್ ಪ್ರದೇಶದಲ್ಲಿರುವ ಗ್ರಾಫೈಟ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯನ್ನು ಮುಚ್ಚುವಂತೆ ಕೆಎಸ್‌ಪಿಸಿಬಿ ಆದೇಶ ನೀಡಿದೆ. ಸ್ಥಳೀಯರು ಕಾರ್ಖಾನೆ ಮುಚ್ಚುವಂತೆ ಹೋರಾಟವನ್ನು ನಡೆಸಿದ್ದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗ್ರಾಫೈಟ್ ಇಂಡಿಯಾ ಲಿಮಿಟೆಡ್ (ಜಿಐಎಲ್) ಕಾರ್ಖನೆಯನ್ನು ಮುಚ್ಚುವಂತೆ ಆದೇಶ ನೀಡಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ.

ಎರಡು ದಶಕಗಳಿಂದ ಕಾರ್ಖಾನೆಯ ಮಾಲಿನ್ಯದ ವಿರುದ್ಧ ಹೋರಾಟ ನಡೆಸಿದ್ದ ಸ್ಥಳೀಯರು ಈ ಕ್ರಮದಿಂದ ಗೆಲವು ಸಾಧಿಸಿದಂತಾಗಿದೆ. ವೈಟ್‌ಫೀಲ್ಡ್ ರೈಸಿಂಗ್ ಸಂಘಟನೆ ಮತ್ತು ಸ್ಥಳೀಯರು ಕಾರ್ಖಾನೆ ವಿರುದ್ಧ ನಿರಂತರ ಹೋರಾಟ ಮಾಡಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿ 1981ರ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 31 ಹಾಗೂ 1983ರ ಕರ್ನಾಟಕ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ನಿಯಮಗಳು 20 (ಎ) ಅಡಿ ಕಾರ್ಖಾನೆಗೆ ನೋಟಿಸ್ ಜಾರಿ ಮಾಡಿತ್ತು.

2020ರ ಜೂನ್ 30ರ ತನಕ ಕೈಗಾರಿಕೆಯನ್ನು ಮುಂದುವರೆಸಲು ನೀಡಿದ್ದ ಅನುಮತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರದ್ದು ಮಾಡಿತ್ತು. ಜಲ ಮತ್ತು ವಾಯು ಮಾಲಿನ್ಯಕ್ಕೆ ಆಸ್ಪದ ಕಲ್ಪಿಸುವ ಯಾವುದೇ ಕೈಗಾರಿಕಾ ಕಾರ್ಯಾಚರಣೆಗೆ ಅವಕಾಶವಿಲ್ಲ ಎಂದು ಹೇಳಿತ್ತು. 2012-13ರಲ್ಲಿ ಕಾರ್ಖನೆ ಮುಚ್ಚುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿದ್ದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಎತ್ತಿ ಹಿಡಿದಿತ್ತು. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಬೇಕಾಗಿದೆ. (ಎನ್.ಬಿ)

Leave a Reply

comments

Related Articles

error: