ಮೈಸೂರು

ಗುಂಗ್ರಾಲ್‍ ಛತ್ರದಲ್ಲಿ ಮತದಾನ ಜಾಗೃತಿ      

ಮೈಸೂರು,ಏ.5:- ಮೈಸೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಗುಂಗ್ರಾಲ್‍ಛತ್ರ ಗ್ರಾಮ ಪಂಚಾಯಿತಿಯ ಪ್ರಮುಖ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರಿಗೆ   ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೃಷ್ಣ ಅವರು ಚುನಾವಣಾ ಪ್ರತಿಜ್ಞಾವಿಧಿ ಬೋಧಿಸಿ ಮತದಾನದ ಬಗ್ಗೆ ಅರಿವು ಮೂಡಿಸಿದರು.

ನಿನ್ನೆ  ಗುಂಗ್ರಾಲ್‍ಛತ್ರ ಗ್ರಾಮದ ಶಾಲಾ ಮಕ್ಕಳು, ಅಂಗವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗುಂಗ್ರಾಲ್‍ಛತ್ರದ ಬೀದಿಗಳಲ್ಲಿ ಜಾಥಾ ನಡೆಸಿ ಕಡ್ಡಾಯ ಮತದಾನದ ಪೋಸ್ಟರ್ ಹಿಡಿದು ಮತ್ತು ನೈತಿಕ ಚುನಾವಣೆಯ ಘೋಷವಾಕ್ಯಗಳನ್ನು ಕೂಗಿ ಜನತೆಗೆ ತಪ್ಪದೇ ಮತ ಚಲಾಯಿಸುವಂತೆ ಅರಿವು ಮೂಡಿಸಿದರು.

ನಂತರ ಮಾತನಾಡಿದ ಅವರು 2019ರ ಏಪ್ರಿಲ್ 18 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರಗೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾದೆ ನೈತಿಕ ಚುನಾವಣೆಗೆ ಬೆಂಬಲ ನೀಡಿ ಪ್ರಜಾ ಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಮತ ಚಲಾಯಿಸಬೇಕು ಎಂದರು.

ಮತದಾರ ಜಾಗೃತರಾಗಿ ತಮ್ಮ ಅಮೂಲ್ಯವಾದ ಮತವನ್ನು ನಿಮ್ಮ ಸಮಸ್ಯೆಗಳನ್ನು ಆಲಿಸುವ ಜನಪರ ಹಾಗೂ ಸಮಾಜಮುಖಿ ಚಿಂತನೆ ಹಾಗೂ ಕಾಳಜಿಯುಳ್ಳ ನಾಯಕನ್ನು ನೀವು ಹಾರಿಸಿಕೊಳ್ಳುವ ಸಂವಿಧಾನ ಬದ್ಧವಾದ ಸ್ವತಂತ್ರ ಹಕ್ಕು ನಿಮ್ಮ ಕೈಯಲ್ಲಿದೆ ಎಂದು ಅವರು ಹೇಳಿದರು.

ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಗಳು ಕಂಡು ಬಂದರೆ ಸಿ-ವಿಜಿಲ್ ಚುನಾವಣಾ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಚುನಾವಣಾ ಅಕ್ರಮಗಳ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಬಹುದು ಎಂದು ಮತದಾರರಿಗೆ ತಿಳಿಸಿದರು.

ಸೆಕ್ಟರ್ ಅಧಿಕಾರಿ ಇರ್ಫಾನ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೃಷಬೇಂದ್ರಪ್ಪ, ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: