ದೇಶಪ್ರಮುಖ ಸುದ್ದಿ

ಹಾರ್ನ್ ಕಿರಿಕಿರಿ ತಪ್ಪಿಸೋಕೆ ಉಪಾಯ ತಿಳಿಸಿದ 11ರ ಹುಡುಗಿ! ಆನಂದ್ ಮಹೀಂದ್ರಾ ಮೆಚ್ಚುಗೆ

ಮುಂಬೈ (ಏ.5): ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡರೆ ಅತೀ ಹೆಚ್ಚು ಕಿರಿಕಿರಿಯಾಗೋದು ಈ ಹಾರ್ನ ಗಳ ಸದ್ದಿನಿಂದ. ಈ ಸಮಸ್ಯೆಗೆ ಪರಿಹಾರ ಹುಡುಕೋದು ಹೇಗೆ ಎಂದು ಆಟೋಮೋಟಿವ್ RnD ಮಾಡುವವರೂ ತಲೆಕೆರೆದುಕೊಳ್ಳುತ್ತಿರುವಾಗ 11ವರ್ಷ ವಯಸ್ಸಿನ ಬಾಲಕಿಯೊಬ್ಬಳು ಇದಕ್ಕೆ ಪರಿಹಾರ ಸೂಚಿಸಿದ್ದಾಳೆ.

ಈ ಬಗ್ಗೆ ಆಕೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ, ಉದ್ಯಮಿ ಆನಂದ್ ಮಹೀಂದ್ರಾ ಅವರಿಗೆ ಮುಂಬೈನ ಮಾಹಿಕಾ ಎಂಬ ಹುಡುಗಿ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಹಾರ್ನ್ ಸಮಸ್ಯೆಯಿಂದ ಆಗುವ ಕಿರಿಕಿರಿ, ಶಬ್ದಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾಳೆ. ಜೊತೆಗೆ ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾಳೆ. ಈಕೆಯ ಕಳಕಳಿ ಮತ್ತು ಬುದ್ಧಿವಂತಿಕೆಯನ್ನು ಕಂಡು ಸ್ವತಃ ಆನಂದ್ ಮಹೀಂದ್ರಾ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಆನಂದ್ ಮಹೀಂದ್ರಾ, “ಕೆಲಸದಿಂದಾಗಿ ಸುಸ್ತಾದ ಸಂಜೆ ಇಂಥದೊಂದು ಮೇಲ್ ನೋಡಿದರೆ ನನಗೆ ನೆಮ್ಮದಿ ಎನ್ನಿಸುತ್ತದೆ, ಮತ್ತೆ ಉತ್ಸಾಹ ಬರುತ್ತದೆ. ನಾನು ಇಂಥ ಜನರಿಗಾಗಿಯೇ ಕೆಲಸ ಮಾಡುತ್ತಿದ್ದೇನೆ. ಈ ಜಗತ್ತು ಉತ್ತಮ ಮತ್ತು ಶಾಂತಿಯುತವಾಗಿರಬೇಕು ಎಂದು ಬಯಸುವವರಿಗಾಗಿ” ಎಂದು ಟ್ವೀಟ್ ಮಾಡಿ, ಮಾಹಿಕಾ ಅವರ ಪತ್ರವನ್ನೂ ಲಗತ್ತಿಸಿದ್ದಾರೆ.

At the end of a tiring day, when you see something like this in the mail..the weariness vanishes…I know I’m working for people like her, who want a better-and quieter world!  pic.twitter.com/lXsGLcrqlf
Anand mahindra (@anandmahindra) April 3, 2019

“ನಾನು ಎಷ್ಟೋ ಡ್ರೈವರ್ ಗಳನ್ನು ನೋಡಿದ್ದೇನೆ. ಎಲ್ಲರೂ ಟ್ರಾಫಿಕ್ ಗಳಲ್ಲಿ ಕಿರಿಕಿರಿಯಾಗುವಷ್ಟು ಹಾರನ್ ಮಾಡುತ್ತಾರೆ. ಅವರು ಹಾರ್ನ್ ಮಾಡಿದ ಮಾತ್ರಕ್ಕೆ ಮುಂದಿರುವ ವಾಹನಗಳು ಮುಂದೆ ಚಲಿಸುವುದಕ್ಕೆ ಆಗುವುದಿಲ್ಲ, ಟ್ರಾಫಿಕ್ ಸಮಸ್ಯೆಯೂ ಪರಿಹಾರವಾಗುವುದಿಲ್ಲ ಎಂಬುದು ಅವರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ನೀವು ತಯಾರಿಸುವ ವಾಹನಗಳಲ್ಲಿ ಹಾರ್ನ್ ಗಳು ಪ್ರತಿ ಹತ್ತು ನಿಮಿಷಕ್ಕೆ ಕೇವಲ ಐದು ಬಾರಿ ಮಾತ್ರವೇ ಸದ್ದು ಮಾಡುವಂತೆ ವಿನ್ಯಾಸಗೊಳಿಸಿ. ಪ್ರತಿ ಸಾರಿ ಸದ್ದು ಮಾಡಿದಾಗಲೂ ಆ ಸದ್ದು, ಕೇವಲ ಮೂರು ಸೆಕೆಂಡ್ ಮಾತ್ರವೇ ಇರಬೇಕು” ಎಂದು ಆ ಬಾಲಕಿ ಪರಿಹಾರ ಸೂಚಿಸಿದ್ದಾಳೆ. (ಎನ್.ಬಿ)

Leave a Reply

comments

Related Articles

error: