ಪ್ರಮುಖ ಸುದ್ದಿಮೈಸೂರು

ಸಾಹಿತಿ ಡಾ.ಸಿ.ಪಿ.ಕೆ ಅವರ 80ನೇ ವರ್ಷದ ಜನ್ಮ ದಿನಾಚರಣೆ : ಸನ್ಮಾನ-ಕೃತಿ ಬಿಡುಗಡೆ

ಮೈಸೂರು,ಏ.5 : ರಾಷ್ಟ್ರೀಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಸೇವಾ ಸಮಿತಿ, ನೃಪತುಂಗ ಚಾರಿಟಬಲ್ ಟ್ರಸ್ಟ್ ಮತ್ತು ಅರಸು ಜಾಗೃತಿ ಅಕಾಡೆಮಿಯ  ಸಂಯುಕ್ತಾಶ್ರಯದಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೆ.ಅವರ 80ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಸಿ.ಪಿ.ಕೆ.ಚುಟುಕು ತೋರಣ ಹಾಗೂ ಕಾವ್ಯಕ್ಕೆ ಗುರು ಕೃತಿಗಳ ಬಿಡುಗಡೆಯನ್ನು ಏ.8ರಂದು ಸಂಜೆ 4.30ಕ್ಕೆ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಸೇವಾ ಸಮಿತಿ ಸಂಸ್ಥಾಪಕಾಧ್ಯಕ್ಷ ಎಸ್.ಎಂ.ಪ್ರಸಾದ್ ತಿಳಿಸಿದರು.

ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಇರುವರು, ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಉದ್ಘಾಟಿಸುವರು, ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಕೃತಿ ಬಿಡುಗಡೆಗೊಳಿಸುವರು, ಅರಸು ಜಾಗೃತಿ ಅಕಾಡೆಮಿ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ ಅಧ್ಯಕ್ಷತೆ ವಹಿಸುವರು. ಅಂಕಣಕಾರ ಪ್ರೊ.ಕೆ.ಭೈರವಮೂರ್ತಿ ಕೃತಿ ಕುರಿತು ಮಾತನಾಡುವರು, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ‘ಧ್ವನಿಕೊಟ್ಟ ದಣಿ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿ : ಸಮಾಜ ಸೇವಕ ಸಿ.ಜಗದೀಶ್, ನೃಪತುಂಗ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶಾಂತ ಮಹದೇವ ಪ್ರಸಾದ್, ಕೃಷಿಕ ಸಮಾಜ ಅಧ್ಯಕ್ಷ ಕೆ.ಬಿ.ಲಿಂಗರಾಜ್, ನಟ ರಾಘುವೇಂದ್ರ ರಾಜೇ ಅರಸ್, ಚಿಕ್ಕಬಳ್ಳಾಪುರದ ಲಯನ್ ಶಿವಕುಮಾರ್, ಉದ್ಯಮಿ ಬಿ.ಕುಮಾರ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಲೆಯೂರು ಉಮೇಶ್, ಮಾಧುರ್ಯ ರಾಮಸ್ವಾಮಿ ಇವರು ಸೇವೆಯನ್ನು ಪರಿಗಣಿಸಿ ‘ಧ್ವನಿಕೊಟ್ಟ ಧಣಿ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

ಅರಸು ಜಾಗೃತಿ ಅಕಾಡೆಮಿಯ ಡಾ. ಎಂ.ಜಿ.ಆರ್.ಅರಸ್, ರತ್ನ ಹಾಲಪ್ಪ ಗೌಡ, ಜ್ಯೋತಿ ಪ್ರಭಾ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: