ಸುದ್ದಿ ಸಂಕ್ಷಿಪ್ತ

ಭ್ರಷ್ಟಾಚಾರ ಕುರಿತು ಜಾಗೃತಿ

ಹಾಸನ (ಏ.5): ಚನ್ನರಾಯಪಟ್ಟಣ ತಾಲ್ಲೂಕು ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಜನ ಸಂಪರ್ಕ ನಡೆಸಲಾಯಿತು. ಸಭೆಯಲ್ಲಿ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ನಿರ್ವಹಿಸುವಲ್ಲಿ ವಿಳಂಬ, ಲಂಚಕ್ಕಾಗಿ ಒತ್ತಾಯ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ದ ನಮಗೆ ದೂರನ್ನು ನೀಡಬಹುದಾಗಿದೆ ಹಾಗೂ ಸಂಬಂದಪಟ್ಟ ಅಧಿಕಾರಿಯ ವಿರುದ್ದ ಹಾಸನ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಗೆ ಭೇಟಿ ಮಾಡಿ ಅಧಿಕಾರಿಗಳ ಬಗ್ಗೆ ಮಾಹಿತಿಯನ್ನು ಒದಗಿಸಬಹುದಾಗಿದೆ, ಹಾಗೂ ಸರ್ಕಾರಿ ನೌಕರರು ತನ್ನ ಆಧಾಯಕ್ಕಿಂತ ಹೆಚ್ಚಿನ ಆಧಾಯ ಹೊಂದಿದ್ದರೆ, ಅಂಚೆ ಮೂಲಕ ನಮಗೆ ಅಕ್ರಮ ಆಸ್ತಿಯ ಬಗ್ಗೆ ತಿಳಿಸಬಹುದು ಎಂದು ಜಾಗೃತಿಯನ್ನು ಮೂಡಿಸಲಾಯಿತು.

ಅಕ್ರಮ ಆಸ್ತಿಯ ಮಾಹಿತಿ ತಿಳಿಸಿದ ವ್ಯಕ್ತಿಯ ಹೆಸರನ್ನು ನಾವು ಬಹಿರಂಗಪಡಿಸುವುದಿಲ್ಲ ಎಂದು ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಮನವರಿಕೆ ಮಾಡಿ ಸಭೆ ನಡೆಸಲಾಯಿತು. ಹಾಸನ ಎಸಿಬಿ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಎಂ.ಎಸ್. ಪೂರ್ಣಚಂದ್ರ ತೇಜಸ್ವಿ ರವರು ಮತ್ತು ಪೊಲೀಸ್ ನಿರೀಕ್ಷಕರಾದ, ಸಿ.ಡಿ.ಜಗದೀಶ್ ರವರು ಸಿಬ್ಬಂದಿಗಳೊಂದಿಗೆ ಹಾಜರಿದ್ದು ಸಭೆ ನಡೆಸಲಾಯಿತು ಎಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: