ಪ್ರಮುಖ ಸುದ್ದಿ

ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ : ನಟಿ ಊರ್ಮಿಳಾ ವಿರುದ್ಧ ದೂರು

ದೇಶ(ನವದೆಹಲಿ)ಏ.8:- ಬಾಲಿವುಡ್ ನಟಿ, ಮುಂಬೈ ನಾರ್ತ್ ಕಾಂಗ್ರೆಸ್ ಅಭ್ಯರ್ಥಿ  ಊರ್ಮಿಳಾ ಮಾತೋಂಡ್ಕರ್ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಸೇರಿದ ನಂತರ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. ಊರ್ಮಿಳಾ ವಿರುದ್ಧ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.

ಮುಂಬೈನ ಪವೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ನಟಿ ಊರ್ಮಿಳಾ ಇದು ನಿರಾಧಾರ ಆರೋಪ ಎಂದಿದ್ದಾರೆ.  ದೂರುದಾರರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.  ಹಿಂಸಾತ್ಮಕ ಸಿದ್ಧಾಂತ ಹೊಂದಿದ್ದ  ಜನರನ್ನು ನಾನು ಪ್ರಶ್ನಿಸಿದ್ದೆ. ಹಿಂದೂ ಧರ್ಮದ ಹೆಸರಿನಲ್ಲಿ ಈ ಸಿದ್ಧಾಂತಗಳು ಜನರನ್ನು ದಾರಿ ತಪ್ಪಿಸುತ್ತವೆ ಎಂದಿದ್ದೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: