ಮೈಸೂರು

ಕೃಷ್ಣನೆಲ್ಲೋ ಅಲ್ಲೆ ನಾವು: ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು

ಶ್ರೀರಂಗಪಟ್ಟಣ: ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿರುವ ಹಿರಿಯ ರಾಜಕಾರಣಿ ಎಸ್‍.ಎಂ. ಕೃಷ್ಣ ಅವರನ್ನು ಹಿಂಬಾಲಿಸುವ ಮಾತುಗಳನ್ನು ಪಕ್ಷದಲ್ಲಿದ್ದ ಅವರ ಬೆಂಗಲಿಗರು ಆಡಿದ್ದಾರೆ.

ಭಾನುವಾರ ಶ್ರೀರಂಗಪಟ್ಟದಲ್ಲಿ ಮಾತನಾಡಿರುವ ಕಾಂಗ್ರೆಸ್‍ ಮುಖಂಡ ರವೀಂದ್ರ ಶ್ರೀಕಂಠಯ್ಯ ಅವರು ಎಸ್ಎಂಕೆ ಕಾಂಗ್ರೆಸ್‍ ಪಕ್ಷದಲ್ಲಿ ಕಳಶವಿದ್ದಂತೆ ಇದ್ದವರು. ಅವರೇ ಪಕ್ಷ ತೊರೆದ ಮೇಲೆ ಕಾಂಗ್ರೆಸ್‍ ಪಕ್ಷದ ಭವಿಷ್ಯ ಮಂಕಾಗಿದೆ. ನಮ್ಮ ನಾಯಕ ಕೃಷ್ಣ ಅವರು ಎಲ್ಲಿರುತ್ತಾರೋ ನಾವೂ ಅಲ್ಲೇ ಇರುತ್ತೇವೆ ಎಂದು ಹೇಳಿದ್ದಾರೆ.

ಈ ಮೂಲಕ ಕೃಷ್ಣ ಅವರು ಯಾವುದೇ ಪಕ್ಷ ಸೇರಿದರೂ ತಾವು ಅವರನ್ನು ಹಿಂಬಾಲಿಸುತ್ತೇವೆ ಎಂದಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಸ್ವತಃ ಕೃಷ್ಣ ಅವರು “ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ” ಎಂದಿರುವುದರಿಂದ ಮುಂದೆ ಅವರು ಬಿಜೆಪಿ ಅಥವಾ ಜೆಡಿಎಸ್ ಸೇರಬಹುದು ಎನ್ನುವ ನಿರೀಕ್ಷೆ ಬೆಂಬಲಿಗರದ್ದು.

ಡಿಕೆಶಿ ದುಗುಡ :

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅವರ ಬಲಗೈ ಬಂಟನಾಗಿದ್ದ ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಎಸ್.ಎಂ.ಕೃಷ್ಣ ಅವರ ನಿರ್ಗಮನದಿಂದ ಆಘಾತವಾಗಿದೆ. 45 ವರ್ಷಗಳಷ್ಟು ಸುದೀರ್ಘ ಕಾಲ ಕಾಂಗ್ರೆಸ್‍ನಲ್ಲಿದ್ದ ಅವರು ಪಕ್ಷದ ಜೊತೆ ಸಂಬಂಧ ಕಡಿದುಕೊಂಡದ್ದು ದುರದೃಷ್ಟಕರ. ಪಕ್ಷದ ವರಿಷ್ಠರಲ್ಲಿ ಜೊತೆ ಈ ವಿಚಾರವಾಗಿ ಮಾತನಾಡುತ್ತೇನೆ ಎಂದು ತಮ್ಮ ನೆಚ್ಚಿನ ನಾಯಕನ ನಿರ್ಗಮನಕ್ಕೆ ದುಗುಡ ವ್ಯಕ್ತಪಡಿಸಿದ್ದಾರೆ.

ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಅವರೂ ಇದೇ ಧಾಟಿಯ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್, ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್  ಅವರೂ ಅವರು ಕೃಷ್ಣ ಅವರ ದಿಢೀರ್ ನಿರ್ಗಮನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Leave a Reply

comments

Related Articles

error: