ಕ್ರೀಡೆವಿದೇಶ

ಕಾರು ಅಪಘಾತ: ಸೌತ್ ಆಫ್ರಿಕಾ ಕ್ರಿಕೆಟ್ ಆಟಗಾರ್ತಿ ಹಾಗೂ ಮಗು ಸಾವು

ಜೋಹಾನ್ಸ್‌ಬರ್ಗ್,ಏ.8-ಕಾರು ಅಪಘಾತದಲ್ಲಿ ಸೌತ್ ಆಫ್ರಿಕಾ ಮಹಿಳಾ ತಂಡ ಆಟಗಾರ್ತಿ, 2013ರ ವಿಶ್ವಕಪ್ ಟೂರ್ನಿ ಪ್ರತಿನಿಧಿಸಿದ್ದ ಎಲ್ರಿಸಾ ಥೆನಿಸೆನ್ ಫೌರಿ (26) ಹಾಗೂ ಮಗು ಸಾವನ್ನಪ್ಪಿದ್ದಾರೆ.

ಫೌರಿ ಖಾಸಗಿ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದ ವೇಳೆ, ಸ್ಟಿಲ್‌ಫೌಂಟೈನ್ ಬಳಿ ಭೀಕರ ಕಾರು ಅಪಘಾತ ಸಂಭವಿಸಿದೆ. ಕಾರಿನಲ್ಲಿ ಫೌರಿ ಹಾಗೂ ಆಕೆಯ ಮಗು ಇಬ್ಬರೇ ಪ್ರಯಾಣಿಸುತ್ತಿದ್ದರು. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

2013ರ ವಿಶ್ವಕಪ್ ಬಳಿಕ ಕೋಚಿಂಗ್‌ನತ್ತ ವಾಲಿದ್ದ ಫೌರಿ, ಸೌತ್‌ಆಫ್ರಿಕಾ ಪರ 3 ಏಕದಿನ ಹಾಗೂ 1 ಟಿ20 ಪಂದ್ಯ ಆಡಿದ್ದ ಫೌರಿ, ಇಂಜುರಿಯಿಂದ ತಂಡದಿಂದ ಹೊರಗುಳಿದರು. 2013ರಲ್ಲಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ಮಿಂಚಿದ್ದರು.

ಫೌರಿ ನಿಧನಕ್ಕೆ ಕ್ರಿಕೆಟ್ ಸೌತ್ ಆಫ್ರಿಕಾ ಸಂತಾಪ ಸೂಚಿಸಿದೆ. ಫೌರಿ ಪತಿ, ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ದುಃಖ ಭರಿಸೋ ಶಕ್ತಿ ಭಗವಂತ ನೀಡಲಿ ಎಂದು ಸೌತ್‌ಆಫ್ರಿಕಾ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ಹೇಳಿದೆ. (ಎಂ.ಎನ್)

Leave a Reply

comments

Related Articles

error: