ಕರ್ನಾಟಕಪ್ರಮುಖ ಸುದ್ದಿ

ತಾಕತ್ತಿದ್ದರೆ ನನ್ನ ಮೇಲಿನ ಕೇಸು ರೀ ಓಪನ್ ಮಾಡಿಸಿ: ಎಚ್‍ಡಿಕೆಗೆ ಬಿಎಸ್ ವೈ ಸವಾಲು!

ಉಡುಪಿ (ಏ.8): ತಾಕತ್ತಿದ್ದರೆ ಮೇ 23ರ ಮೊದಲು ನನ್ನ ಮೇಲಿನ ಎಲ್ಲ ಕೇಸುಗಳನ್ನು ರೀ ಓಪನ್ ಮಾಡಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಸಿ.ಎಂ ಎಚ್‍.ಡಿ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯ ವೇಳೆ ಯಡಿಯೂರಪ್ಪ ಆಡಿಯೋ ತನಿಖೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಆತುರ ಏನಿಲ್ಲ. ಆಡಿಯೋ ಎಲ್ಲೂ ಹೋಗಲ್ಲ. ಈಗಲೇ ತನಿಖೆಗೆ ಕೊಟ್ಟರೆ ಇನ್ಯಾವುದೋ ರೀತಿಯಲ್ಲಿ ಅಪಪ್ರಚಾರ ಮಾಡುತ್ತಾರೆ. ಅಧಿಕಾರ ದುರುಪಯೋಗ ಮಾಡಿ ಯಡಿಯೂರಪ್ಪನವರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಾರೆ. ಚುನಾವಣೆ ಮುಗಿಯಲಿ ಆಮೇಲೆ ತನಿಖೆ ಮಾಡುವ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಮತದಾನದ ಬಳಿಕ ಯಡಿಯೂರಪ್ಪ ವಿರುದ್ಧ ಕೇಸ್ ರೀ ಒಪನ್ ಮಾಡಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಆದರೆ ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆ, ತಾಕತ್ತು ಸಿಎಮ್‍ಗೆ ಇಲ್ಲ. ಎಲ್ಲವನ್ನೂ ಎದುರಿಸಿದ್ದೇನೆ, ಮುಂದೆಯೂ ಎದುರಿಸುತ್ತೇನೆ ತಾಕತ್ತು ಇದ್ದರೆ ನನ್ನ ಮೇಲಿನ ಎಲ್ಲಾ ಕೇಸು ರೀ ಓಪನ್ ಮಾಡಿಸಿ, ಮೇ 23ರ ಮೊದಲು ಕೇಸು ಓಪನ್ ಮಾಡಿಸಿ. ಏಕೆಂದರೆ ಮೇ 23 ನಂತರ ನೀವು ಮನೆಗೆ ಹೋಗುತ್ತೀರಿ, ಆಮೇಲೆ ಕೇಸು ನಾವು ಓಪನ್ ಮಾಡಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ. (ಎನ್.ಬಿ)

Leave a Reply

comments

Related Articles

error: