ಮೈಸೂರು

ಏಪ್ರಿಲ್‍ನೊಳಗೆ ರಾಜ್ಯಾದ್ಯಂತ ಪಡಿತರ ಕೂಪನ್ ವ್ಯವಸ್ಥೆ : ಹರ್ಷಗುಪ್ತ

ರಾಜ್ಯ ಸರ್ಕಾರ ನೂತನವಾಗಿ ಜಾರಿಗೊಳಿಸಲಿರುವ ಕೂಪನ್ ವ್ಯವಸ್ಥೆಯನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ಆಹಾರ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿ ಜ.31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಡಿತರ ಕೂಪನ್‍ಗೆ ಚಾಲನೆ ನೀಡಲಿದ್ದು, ರಾಜ್ಯದಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳೊಳಗೆ ಸಂಪೂರ್ಣವಾಗಿ ಜಾರಿಯಾಗಲಿದ್ದು, ಪಡಿತರ ಸೋರಿಕೆಯನ್ನು ತಡೆಗಟ್ಟವಲ್ಲಿ ಯಶಸ್ವಿಯಾಗಲಿದ್ದು, ಪ್ರಸ್ತುತ ನಗರ ಪ್ರದೇಶಗಳಲ್ಲಿ ಕೆಲವೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕೂಪನ್ ವ್ಯವಸ್ಥೆಯಿದೆ. ಇದರಿಂದ ಶೇ.15ರಷ್ಟು ಹಣ ಉಳಿತಾಯವಾಗಲಿದೆ. ಕೂಪನ್‍ಗಳು ಸೇವಾ ಕೇಂದ್ರ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯವಿದ್ದು, ಮೊಬೈಲ್‍ನಲ್ಲಿ 161ಗೆ  ಕರೆ ಮಾಡಿ ಕೂಪನ್ ಪಡೆಯಬಹುದು. ಗ್ಯಾಸ್ ಹಾಗೂ ವಿದ್ಯುತ್ ಸಂಪರ್ಕ ಹೊಂದಿರುವ ಕುಟುಂಬಗಳಿಗೆ ಸೀಮೆ ಎಣ್ಣೆ ಪೂರೈಕೆಯನ್ನು ನಿರ್ಬಂಧಿಸಲಾಗುವುದು, ಆಧಾರ್ ಜೋಡಣೆಯಿಂದ ಸುಮಾರು 70 ಲಕ್ಷ ನಕಲಿ ಪಡಿತರ ಚೀಟಿದಾರರು ಪತ್ತೆಯಾಗಿದ್ದು ಅವುಗಳನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಿ.ರಂದೀಪ್, ಆಹಾರ ಇಲಾಖೆ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: