
ಮೈಸೂರು,ಏ.8 : ಊಟ ಅವರಿಚ್ಚೆಯಾದರೂ ದೇಹಕ್ಕೆ ಯಾವುದು ಒಳಿತು ಎಂಬ ಸಂದೇಶ ಸಾರುವ ಶ್ರೀರೇಣುಕಾಂಬ ಸಿನಿ ಕಂಬೈನ್ಸ್ ಬ್ಯಾನರ್ ನಡಿ ಮೂಡಿರುವ ‘ಬಾಡು ಬಳ್ಳೇಪುರ’ ಹಾಸ್ಯಮಯ ಚಲನಚಿತ್ರದ ಧ್ವನಿಸುರಳಿಯನ್ನು ಇಂದು ಪತ್ರಕರ್ತರ ಭವನದಲ್ಲಿ ಬಿಡುಗಡೆಗೊಳಿಸಿದರು.
ಸಂಪೂರ್ಣ ಹಳ್ಳಿಗಾಡಿನ ಚಿತ್ರದಲ್ಲಿ ತಿಥಿ ಖ್ಯಾತಿಯ ಗಡ್ಡಪ್ಪ ಮುಖ್ಯ ಪಾತ್ರದಾರಿಯಾಗಿದ್ದು ಅವರ 12ನೇ ಚಿತ್ರವಾಗಿದೆ, ಸಹ ಕಲಾವಿದರಾದ ವಿನಯ್ ಗೌಡ, ಅಶ್ವಿನಿದೇವಿ, ಯೋಗೇಶ್, ಮಂಜುನಾಥ್, ಚೌಡಯ್ಯ, ನರಸಯ್ಯ ಮುಂತಾದವರು ನಟಿಸಿದ್ದಾರೆ. ಸಿನಿಮಾ ಹಳ್ಳಿ ಸೊಗಡಿನ ಹಾಸ್ಯಮಯ ಚಿತ್ರವು, ಸುಮಾರು 25 ಲಕ್ಷ ರು. ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದೆ, ಹಾಸ್ಯಮಯ ವಿಷಯದಲ್ಲಿ ಗಂಭೀರ ಸಂದೇಶವನ್ನು ಸಾರುವುದೇ ಚಿತ್ರದ ಉದ್ದೇಶ ಎಂದು ಚಿತ್ರದ ನಿರ್ದೇಶಕ ರಾಕೇಶ್ ಗೌಡ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಜುಕವಿ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನದಲ್ಲಿ ಬಾಡೂಟ ಹಾಗೂ ಮದ್ಯದ ಮೇಲೆ ಮೂಡಿರುವ ಹಾಡುಗಳು ಅತ್ಯುತ್ತಮವಾಗಿದ್ದು ಪ್ರೇಕ್ಷಕರನ್ನು ಆಕರ್ಷಿಸುತ್ತವೆ, ವಿಲ್ ಸ್ಟೆನ್ ಗೋನ್ಸ್ ಲ್ಟಾಸ್ ವಾದ್ಯ ಸಂಯೋಜನೆ ಮಾಡಿರುವರು ಎಂದರು.
ಸಂಗೀತ ನಿರ್ದೇಶಕ ಮಂಜುಕವಿ, ಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ಛಾಯಾಗ್ರಾಹಕ ಚೇತನ್ ರವಿರಾಜ್, ಕೋರಿಯಾಗ್ರಾಫರ್ ಟಿ.ಅಜಯ್ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)