ಮೈಸೂರು

ಲಲಿತ ಮಹಲ್ ಹೋಟೆಲ್ ಖಾಸಗಿ ನಿರ್ವಹಣೆಗೆ ಜೆಡಿಎಸ್‍ ವಿರೋಧ

ಮೈಸೂರು: ಪ್ರಸಿದ್ಧ ಲಲಿತ್‍ ಮಹಲ್ ಹೋಟೆಲ್ ನಿರ್ವಹಣೆಯನ್ನು ಖಾಸಗೀಕರಣಕ್ಕೆ ಜೆಡಿಎಸ್‍ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಹೇಳಿಕೆ ಪತ್ರಿಕಾ ನೀಡಿರುವ ಜೆಡಿಎಸ್‍ ಅಧ್ಯಕ್ಷ ಹರೀಶ್ ಗೌಡ ಅವರು, ಪಾರಂಪರಿಕ ಕಟ್ಟಡವಾದ ಲಲಿತ್‍ ಮಹಲ್ ಹೋಟೆಲ್ ಅನ್ನು ಖಾಸಗಿಯವರಿಗೆ ವಹಿಸುದರಿಂದ ಕಟ್ಟಡಕ್ಕೆ ಧಕ್ಕೆಯಾಗಬಹುದು.

ಮೈಸೂರಿನ ಪಾರಂಪಾರಿಕ ಸೌಂದರ್ಯವನ್ನು ಹೊಂದಿರುವ ಲಲಿತ್‍ ಮಹಲ್ ಹೋಟೆಲ್‍ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಿ ತನ್ನದೇ ಆದ ಘನತೆ-ಗೌರವವನ್ನು ಉಳಿಸಿಕೊಂಡು ಬಂದಿದೆ. ಇಂತಹ ಹೋಟೆಲ್ ಅನ್ನು ವಹಿಸಿಕೊಳ್ಳಲು ಸಚಿವರೊಬ್ಬರ ಪುತ್ರ ಉತ್ಸುಕತೆ ತೋರಿದ್ದಾರೆ ಎಂದು ತಿಳಿದು ಬಂದಿದೆ. ಖಾಸಗೀಕರಣದಲ್ಲಿ ಸ್ವಜನ ಪಕ್ಷಪಾತ ನಡೆಸುವ ಹುನ್ನಾರ ಇರುವ ಲಕ್ಷಣಗಳಿವೆ. ಒಂದು ವೇಳೆ ಸರ್ಕಾರ ತನ್ನ ನಿರ್ಧಾರಕ್ಕೆ ಅಂಟಿಕೊಂಡಲ್ಲಿ ಜೆಡಿಎಸ್‍ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Leave a Reply

comments

Related Articles

error: