Uncategorized

ಏ.10ರಂದು ವಿಶ್ವಕರ್ಮ ರಥೋತ್ಸವ

ನಾಳೆಯಿಂದ : ವಿವಿಧ ಪೂಜಾ ಕೈಂಕರ್ಯಗಳು

ಮೈಸೂರು, ಏ.8 : ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಠದ ವಿಶ್ವಕರ್ಮ ಪೀಠದ ಜಗದ್ಗುರು ಶಿವಸುಜ್ಞಾನತೀರ್ಥ ಸ್ವಾಮೀಜಿಗಳ ಷಷ್ಠಿಪೂರ್ತಿ ಸಮಾರಂಭ ಹಾಗೂ 37 ನೇ ವರ್ಷದ ಪಟ್ಟಾಭಿಷೇಕ ವಾರ್ಷಿಕೋತ್ಸಮ ಮತ್ತು ಧಾರ್ಮಿಕ ಸಮಾರಂಭ ಏ. 9 ಮತ್ತು 10ರಂದು  ವಿಶ್ವಬ್ರಾಹ್ಮಣ ಸಂಸ್ಥಾನ ಮಠದಲ್ಲಿ ನಡೆಯಲಿದೆ ಎಂದು ಜಿಲ್ಲಾ ವಿಶ್ವಕರ್ಮ ಮಹಾ ಒಕ್ಕೂಟ ತಿಳಿಸಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಸಿ. ಹುಚ್ಚಪ್ಪಚಾರ್, ಕಾರ್ಯಕ್ರಮ ಅಂಗವಾಗಿ ಏ. 9 ಸಂಜೆ ಏಳಕ್ಕೆ ರಾಜ್ಯ ವಿಶ್ವ ಬ್ರಾಹ್ಮಣ ಮಠಾಧಿಪತಿಗಳ ಸಮಾಲೋಚನಾ ಸಭೆ, ರಾತ್ರಿ 8.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಏ. 10 ರಂದು ಬೆಳಗ್ಗೆ ರಥೋತ್ಸವ, 10.50ಕ್ಕೆ ಧಾರ್ಮಿಕ ಸಭೆ ಸಹಾ ನಡೆಯಲಿದ್ದು, ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆಂದರು.

ಈ ವೇಳೆ, ಎಚ್.ಡಿ. ದೇವೇಗೌಡ, ಎಚ್.ಡಿ. ರೇವಣ್ಣ, ಡಾ.ಎ.ಟಿ. ರಾಮಸ್ವಾಮಿ, ಎ. ಮಂಜು, ರಘು ಆಚಾರ್, ಕೆ.ಪಿ. ನಂಜುಂಡಿ, ಇನ್ನಿತರರು ಹಾಜರಿರುವರೆಂದರು.

ಟಿ. ನಾಗರಾಜು, ಕೆ.ಎಸ್. ರೇವಣ್ಣ, ಜಯತೀರ್ಥ, ಈಶ್ವರಚಾರ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: