Uncategorized
ಜನರಿಕ್ ಔಷಧಿ ಬಣ್ಣ ಬದಲಿಸಲು ಮನವಿ
ಮೈಸೂರು,ಏ.8 : ಕೇಂದ್ರ ಸರ್ಕಾರದ ಮಹತ್ವ ಪೂರ್ಣ ಯೋಜನೆಯಾದ ಜನರಿಕ ಔಷಧಿಯನ್ನು ಏಕ ಬಣ್ಣದಲ್ಲಿ ಮುದ್ರಿತವಾಗುತ್ತಿದ್ದು ಇದರಿಂದ ರೋಗಿಗಳಿಗೆ ಗೊಂದಲ ಮೂಡಲಿದ್ದು ಆದ್ದರಿಂದ ವಿವಿಧ ಬಣ್ಣಗಳಲ್ಲಿ ಪ್ಯಾಕಿಂಗ್ ಮಾಡಬೇಕೆಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿಯು ಹೇಳಿದೆ.
ರಕ್ತದೊತ್ತಡ. ಮಧುಮೇಹ, ಕೊಲೆಸ್ಟ್ರಾಲ್ ಇನ್ನಿತರ ಕಾಯಿಲೆಗಳಿಗೆ ಸಂಬಂಧಿಸಿದಂತೆ ಸರಬರಾಜಾಗುತ್ತಿರುವ ಮಾತ್ರೆಗಳು ಒಂದೆ ಬಣ್ಣದಡಿ ಬರುತ್ತಿದ್ದು ಅದರ ಪ್ಯಾಕಿಂಗ್ ಅನ್ನು ಬದಲಾಯಿಸಬೇಕೆಂದು ಕೋರಲಾಗಿದೆ. (ಕೆ.ಎಂ.ಆರ್)