ಮೈಸೂರು

ಮನೆಗೆ ನುಗ್ಗಿ ಚಿನ್ನ ದೋಚಿ ಪರಾರಿ

ಬೀಗ ಹಾಕಿದ್ದ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 2 ಲಕ್ಷ ರೂ. ಬೆಲೆ ಬಾಳುವ 98 ಗ್ರಾಂ. ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ರಾಮಕೃಷ್ಣನಗರದ ಮುಡಾ ಬಡಾವಣೆಯ ನಾರಾಯಣರಾವ್ ಅವರ ಮನೆಯಲ್ಲಿ ನಡೆದಿದೆ.

ನಾರಾಯಣರಾವ್ ಅವರು ಕಾರ್ಯನಿಮಿತ್ತ ಕುಟುಂಬ ಸಮೇತರಾಗಿ ಬೆಂಗಳೂರಿಗೆ ತೆರಳಿದ್ದರು. ಈ ಸಮಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ 40 ಗ್ರಾಂ ಚಿನ್ನದ ಸರ, 25 ಗ್ರಾಂ ನಕ್ಲೆಸ್, ಒಂದು ಜೊತೆ ವಜ್ರದ ಓಲೆ, 8 ಗ್ರಾಂ ನ 2 ಜೊತೆ ಓಲೆ, 25 ಗ್ರಾಂ ಬೆಳ್ಳಿ ಪದಾರ್ಥ ಹಾಗೂ 5 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.  ಶನಿವಾರ ಮನೆ ಕೆಲಸದಾಕೆ ಬಂದಾಗ ಮುಂಬಾಗಿಲು ಮುರಿದದಿದ್ದನ್ನು ಕಂಡು ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: