ಕರ್ನಾಟಕಪ್ರಮುಖ ಸುದ್ದಿ

ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೆರೇಪಿಸಿ: ಡಾ.ಕೆ.ಎನ್.ವಿಜಯ್ ಪ್ರಕಾಶ್

ಹಾಸನ (ಏ.9): ಜಿಲ್ಲೆಯಲ್ಲಿರುವ ವಿಶೇಷ ಚೇತನರಿಗೆ ಎಲ್ಲಾ ರೀತಿಯ ಅನುಕೂಲಗಳನ್ನು ಕಲ್ಪಿಸಿ ಮತದಾನದಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಪ್ರೆರೇಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಕೆ.ಎನ್.ವಿಜಯ್ ಪ್ರಕಾಶ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ, ಸ್ಕೌಟ್ಸ್ ಅಂಡ್ ಗೈಡ್ಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ 12,811 ಜನರು ವಿಶೇಷ ಚೇತನರಿದ್ದು, ಅವರಲ್ಲಿ 2074 ಜನ ಸಂಪೂರ್ಣ ವಿಕಲಚೇತನರಾಗಿದ್ದಾರೆ 1118 ಜನ ಸಂಪೂರ್ಣ ಅಂಧರಿದ್ದಾರೆ, ಮತದಾನ ದಿನದಂದು ವಿಶೇಷ ಚೇತನರಿಗಾಗಿ ಆಟೋ ಸೌಲಭ್ಯ ಸೇರಿದಂತೆ ಇತರೆ ಅನುಕೂಲವಿದ್ದು, ಜಿಲ್ಲೆಯ ಎಲ್ಲಾ ವಿಶೇಷ ಚೇತನ ಮತದಾರರಿಗೆ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡವು ವಿಶೇಷವಾಗಿ ನಿಗಾವಹಿಸಬೇಕಿದೆ ಎಂದು ಅವರು ತಿಳಿಸಿದರು.

ಕಾಲೇಜು, ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್‍ಗಳು ಮತದಾರರ ಸಹಾಯಕ್ಕೆಂದು ಪ್ರತಿ ಮತಗಟ್ಟೆಗೆ ಒಬ್ಬತಂತೆ ಆಯ್ಕೆಮಾಡಿದ್ದು, ಚುನಾವಣಾ ದಿನದಂದು ಬೆಳಗ್ಗೆಯಿಂದಲೇ ವಿಕಲಚೇತನರನ್ನು ಗಮನಿಸಿ ಮತದಾನ ಕ್ಷೇತ್ರಕ್ಕೆ ಕರೆತರುವಂತಹ ಕೆಲಸಗಳು ನಡೆಯಬೇಕು. ಇದಕ್ಕೆ ಆಟೋ ಸೌಲಭ್ಯವಿದ್ದು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು ಎಂದು ವಿಜಯ್ ಪ್ರಕಾಶ್ ಅವರು ಸಲಹೆ ನೀಡಿದರು.

ಅಲ್ಲದೇ ಏ.10 ರಿಂದ ಜಿಲ್ಲೆಗೆ ಚಂದನ್‍ಶೆಟ್ಟಿ ಅವರು ಆಗಮಿಸುತ್ತಿದ್ದು ಸ್ಕೌಟ್ಸ್ ಅಂಡ್ ಗೈಡ್ಸ್’ನ ಸಹಕಾರ ತುಂಬಾ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ವರನ್ನು ಎಲ್ಲಾ ರೀತಿಯಲ್ಲಿ ರಚನಾತ್ಮಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯಾದ ಪುಟ್ಟಸ್ವಾಮಿ, ಸ್ಕೌಟ್ಸ್ ಅಂಡ್ ಗೈಡ್ಸ್‍ನ ಮುಖ್ಯ ಆಯುಕ್ತರಾದ ಡಾ. ವೈ.ಎಸ್.ವೀರಭದ್ರಪ್ಪ, ಡಿಡಿಪಿಐ ಮಂಜುನಾಥ್, ಡಿಡಿಪಿಯು ವಾಮರಾಜ್, ಸ್ವೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳಾದ ವಿನೋದ್‍ಚಂದ್ರ ಸೇರಿದಂತೆ ಸ್ಕೌಟ್ಸ್ ಅಂಡ್ ಗೈಡ್ಸ್‍ನ ತಾಲ್ಲೂಕುವಾರು ಅಧಿಕಾರಿಗಳು ಭಾಗವಹಿಸಿದ್ದರು. (ಎನ್.ಬಿ)

Leave a Reply

comments

Related Articles

error: