ಕರ್ನಾಟಕಪ್ರಮುಖ ಸುದ್ದಿ

ಕಿವುಡರು, ಅಂಧರಿಗೂ ಮತದಾನದ ತರಬೇತಿ ನೀಡಿ: ಹಾಸನ ಜಿಲ್ಲಾಧಿಕಾರಿ

ಹಾಸನ (ಏ.9): ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಶ್ರವಣದೋಷ ಹಾಗೂ ಅಂಧ ಮತದಾರರು ಯಾವ ರೀತಿ ಮತದಾನದ ಹಕ್ಕು ಚಲಾಯಿಸಬೇಕು ಎಂಬ ತರಬೇತಿಯನ್ನು ಸಂಪೂರ್ಣವಾಗಿ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ವಿಶೇಷ ಚೇತನರಿಗೆ ಚುನಾವಣಾ ಸಂಬಂಧ ಶ್ರವಣದೋಷ ಹಾಗೂ ವಿಶೇಷ ಚೇತನ ಮತದಾರರು ಮತದಾನ ಯಂತ್ರದಲ್ಲಿ ಮತದಾನ ಮಾಡುವ ಸಾಂಕೇತ ಭಾಷೆಯ ಪ್ರಾತ್ಯಾಕ್ಷಿಕ ಸಂಪನ್ಮೂಲ ವ್ಯಕ್ತಿಯ ಕಾರ್ಯಗಾರದಲ್ಲಿ ಸೋಮವಾರ ಮಾತನಾಡಿದ ಅವರು ಇ.ವಿ.ಎಂ ಹಾಗೂ ವಿ.ವಿ.ಪ್ಯಾಟ್‍ಗಳ ತರಬೇತಿಯನ್ನು ನೀಡುವುದರ ಜೊತೆಗೆ ಅರ್ಥಪೂರ್ಣವಾಗಿ ತಿಳಿಸಬೇಕು ಎಂದು ತಿಳಿಸಿದರು.

ಮತಗಟ್ಟೆಗಳಲ್ಲಿ ಯಾವ ರೀತಿ ಪ್ರಕ್ರಿಯೆ ಜರುಗುವುದು ಎಂಬುದನ್ನು ಅವರುಗಳ ಸಾಂಕೇತ ಭಾಷೆಗಳಲ್ಲಿಯೇ ಮತದಾನದ ಅರಿವು ಮೂಡಿಸಬೇಕು ಎಂದು ಪ್ರಿಯಾಂಕ ಮೇರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಕೆ.ಎನ್.ವಿಜಯ್ ಪ್ರಕಾಶ್ ಮಾತನಾಡಿ ಮತದಾನದಂತಹ ಪವಿತ್ರವಾದ ಕಾರ್ಯದಲ್ಲಿ ಪ್ರತಿಯೊಬ್ಬರು ತಪ್ಪದೇ ಪಾಲ್ಗೊಳ್ಳಬೇಕು. 38 ಹೋಬಳಿಗಳಲ್ಲಿ ಇದೇ ರೀತಿಯ ತರಬೇತಿಗೆ ಈಗಾಗಲೇ ಸಿದ್ದತೆಗಳು ನಡೆಯುತ್ತಿವೆ. ಚುನಾವಣಾ ಕೆಲಸ ನಿರ್ವಹಿಸುತ್ತಿರುವ ಯಾವುದೇ ಸಿಬ್ಬಂದಿಗಳು ತಮ್ಮ ಗುರುತಿನ ಚೀಟಿಗಳ ವಿತರಣೆಗೆ ಸ್ಥಳೀಯ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದ್ದು ಯಾವ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸದಂತೆ ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ವಿಶೇಷ ಚೇತನ ಮತದಾರರಿಗೆ ತರಬೇತಿದಾರರು ಯಾವ ರೀತಿ ತರಬೇತಿ ನೀಡಬೇಕೆಂದು ತರಬೇತಿ ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಪುಟ್ಟಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಪ್ರಭಾರ ಯೋಜನಾ ನಿರ್ದೇಶಕರಾದ ಲಕ್ಷ್ಮಿ.ಪಿ ಮತ್ತಿತರರು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: