ಪ್ರಮುಖ ಸುದ್ದಿ

ನಾನು ರೈತರಿಗಾಗಿ ಏನು ಮಾಡಿದ್ದೇನೆಂದು ಇವರಿಗೆ ಸಾಕ್ಷಿ ತೋರಿಸಬೇಕಿಲ್ಲ : ಸಿಎಂ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ರಾಕಿಂಗ್ ಸ್ಟಾರ್ ಯಶ್

ರಾಜ್ಯ(ಮಂಡ್ಯ)ಏ.9:- ಸಕ್ಕರೆ ನಾಡು ಮಂಡ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ಆರೋಪ, ಪ್ರತ್ಯಾರೋಪ ಕೆಸರೆರಚಾಟಗಳು ಮುಂದುವರಿದಿವೆ.

ನಟ ಅಂಬರೀಶ್ ಪರ ಪ್ರಚಾರಕ್ಕಿಳಿದಿರುವ ರಾಕಿಂಗ್ ಸ್ಟಾರ್  ಯಶ್, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಇಂದು ಮಂಡ್ಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾವು ಮಾತನಾಡಿದರೆ ಸಿನಿಮಾದವರು ಎನ್ನುತ್ತಾರೆ. ಹಾಗಾದರೆ ಅವರೇನು ಸತ್ಯ ಹರಿಶ್ಚಂದ್ರನ ತುಂಡುಗಳಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಇವತ್ತು ದುಶ್ಮನಿ ಮಾಡಿದರೆ ನಾಳೆ ಸ್ನೇಹಿತರಾಗಲ್ಲ. ಜೀವನಪೂರ್ತಿ ದುಶ್ಮನಿ ಮಾಡುತ್ತೇವೆ. ನಾನು ಅಂಬರೀಶಣ್ಣನ ಅಭಿಮಾನದಿಂದ ಬಂದಿರೋದು, ಅಂಬರೀಶಣ್ಣ ಇದ್ದಾಗ ಕೈಕಟ್ಟಿ ನಿಲ್ಲುತ್ತಿದ್ದವರು ಇಂದು ಅವರಿಲ್ಲವೆಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಂಡ್ಯದ ಜನರನ್ನು ಎಷ್ಟು ಸಲ ದಡ್ಡರನ್ನಾಗಿ ಮಾಡುತ್ತೀರಿ ಎಂದರು. ಇದು ಕೇಂದ್ರದಲ್ಲಿ ಸರ್ಕಾರ ರಚನೆಗೆ ನಡೆಯುತ್ತಿರುವ ಚುನಾವಣೆಯೇ ಹೊರತು ರಾಜ್ಯದ ಚುನಾವಣೆ ಅಲ್ಲ. ನಾನು ರೈತರಿಗಾಗಿ ಏನು ಮಾಡಿದ್ದೇನೆಂದು ಇವರಿಗೆ ಸಾಕ್ಷಿ ತೋರಿಸಬೇಕಿಲ್ಲ. ರೈತರೇ ತೋರಿಸುತ್ತಾರೆ ಎಂದು ಸಿಎಂ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: