ಪ್ರಮುಖ ಸುದ್ದಿ

ನಾಳೆಯಿಂದ ಎರಡು ದಿನಗಳ ಕಾಲ ಮಂಡ್ಯದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಸ್ತವ್ಯ : ಸಚಿವ ಸಿ.ಎಸ್. ಪುಟ್ಟರಾಜು

ರಾಜ್ಯ(ಮಂಡ್ಯ)ಏ.9:-  ನಾಳೆಯಿಂದ ಎರಡು ದಿನಗಳ ಕಾಲ ಮಂಡ್ಯದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ವಾಸ್ತವ್ಯ ಹೂಡಲಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿಎಂ ಮಗನ ಪರವಾಗಿ ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ  ಪ್ರಚಾರ ನಡೆಸಲಿದ್ದು, ನಾಳೆ ಶ್ರೀರಂಗಪಟ್ಟಣ ಮತ್ತು ನಾಳಿದ್ದು ಮದ್ದೂರು, ಮಳವಳ್ಳಿಗಳಲ್ಲಿ ಪ್ರಚಾರ ನಡೆಸುತ್ತಾರೆ. 13ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಪ್ರಚಾರಕ್ಕೆ ರಾಹುಲ್ ಗಾಂಧಿ ಬರಲಿದ್ದು, ಅಂದು ಕೂಡ ರಾಹುಲ್ ಜೊತೆ ಪ್ರಚಾರ ನಡೆಸಲಿದ್ದಾರೆ. 14 ರಂದು ತುಮಕೂರಿನಲ್ಲಿ ತಂದೆ ಪರವಾಗಿ ಪ್ರಚಾರ ಮಾಡುತ್ತಾರೆ. 12 ಮತ್ತು 15 ರಂದು ಮೇಲುಕೋಟೆ ಮತ್ತು ಕೆ.ಆರ್.ಪೇಟೆಯಲ್ಲಿ ಪ್ರಚಾರ ಮಾಡುತ್ತಾರೆ. ಏ.16 ರಂದು ನಾಗಮಂಗಲ ಮತ್ತು ಮಂಡ್ಯದಲ್ಲಿ ಪ್ರಚಾರ ಮಾಡಲಿದ್ದು, ಏ.12 ರಂದು ಸಿದ್ದರಾಮಯ್ಯ ಜೊತೆ ದೇವೇಗೌಡರು ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಾರೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: