ಮೈಸೂರು

ಏ.12 ರಿಂದ ಶ್ರೀರಾಮನವಮಿ : ವಿಶೇಷ ಕಾರ್ಯಕ್ರಮ

ಮೈಸೂರು,ಏ.9 : ಮಾನಂದವಾಡಿಯ ರೈಲ್ವೆ ಕಾಲೋನಿಯ ಶ್ರೀಸೀತಾರಾಮ ದೇವಸ್ಥಾನ ಟ್ರಸ್ಟ್ ವತಿಯಿಂದ ಏ.12 ರಿಂದ 21ರವರೆಗೆ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಏ.12ರ ಸಂಜೆ 6ಕ್ಕೆ ಸಭಾ ಅನುಜ್ಞೆ, ಗಣಪತಿ ಹೋಮ, .13 ಬೆಳಗ್ಗೆ 7 ಗಂಟೆಯಿಂದ ಅಭಿಷೇಕ, ನಂತರ 11.30ಕ್ಕೆ ಶ್ರೀರಾಮನವಮಿ, ಅದರ ಪ್ರಯುಕ್ತ ವಿಶೇಷ ಪೂಜೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಏ.14ರ ಸಂಜೆ 6.30ಕ್ಕೆ ದೇವಸ್ಥಾನ ಭಜನ ಮಂಡಳಿಯವರಿಂದ ಭಜನೆ, 15. ಸಂಜೆ 6.30ಕ್ಕೆ ದೇವರನಾಮ, 16. ಸಂಜೆ 6.30ಕ್ಕೆ ರೈಲ್ವೆ ಕಾರ್ಯಗಾರದ ಕಲಾತಂಡದಿಂದ ಭಕ್ತಿಗೀತಾ ಕಾರ್ಯಕ್ರಮ, 17 ದೇವರನಾಮ ಹಾಗೂ ಭಕ್ತಿಗೀತೆ, 18.ದೇವರನಾಮ, ಏ.19ರ ಬೆಳಗ್ಗೆ 10ಕ್ಕೆ ಹುಣಿಮೆ ಪ್ರಯುಕ್ತ ಸತ್ಯನಾರಾಯಣ ಪೂಜೆ ಹಾಗೂ ಸಂಜೆ 6ಕ್ಕೆ ಸೀತಾರಾಮ ಕಲ್ಯಾಣ ಮಹೋತ್ಸವ, 20. ಪಂಚಾಮೃತ ಅಭಿಷೇಕ ಸಂಜೆ 6ಕ್ಕೆ ಪಲ್ಲಕ್ಕಿ ರಥೋತ್ಸವ, 21ರಂದು ಹನುಮಂತೋತ್ಸವ, ಅನ್ನಸಂತರ್ಪಣೆ ಹಾಗೂ ಸಂಜೆ 7ಕ್ಕೆ ಶಯನೋತ್ಸವವನ್ನು ಮತ್ತು ರಾಷ್ಟ್ರಾಶೀರ್ವಾದವನ್ನು ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: