ಮೈಸೂರು

ಸ್ವಚ್ಛ ಮೇವ ಜಯತೆ ಕಾರ್ಯಕ್ರಮಕ್ಕೆ ಚಾಲನೆ : ಕಸವನ್ನು ಎಲ್ಲೆಂದರಲ್ಲಿ ಸುರಿಯಬೇಡಿ : ಮೇಯರ್ ಮನವಿ

ಮೈಸೂರಿನ ಕುಕ್ಕರಹಳ್ಳಿ ಕೆರೆಯ ಆವರಣದಲ್ಲಿರುವ ಮೀನು ಮಾರಾಟ ಮಳಿಗೆಯಲ್ಲಿ ಸ್ವಚ್ಛ ಭಾರತ್ ಅಭಿಯಾನದಡಿ ಹಮ್ಮಿಕೊಂಡಿರುವ ಸ್ವಚ್ಛಮೇವ ಜಯತೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ಹಾಗೂ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹೈದ್ರಾಬಾದ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛಮೇವ ಜಯತೆ ಕಾರ್ಯಕ್ರಮಕ್ಕೆ ಮಹಾನಗರಪಾಲಿಕೆಯ ಮಹಾಪೌರ  ಎಂ.ಜೆ.ರವಿಕುಮಾರ್ ಫಲಾನುಭವಿಗಳಿಗೆ  ಕಸ ಹಾಕುವ ಬಕೆಟ್  ವಿತರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಮೀನು ಸಂಸ್ಕರಿಸುವಾಗ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೇ ಬಕೆಟ್ ನಲ್ಲಿ ಸಂಗ್ರಹಿಸಿದರೆ ಒಳ್ಳೆಯದು. ಎಲ್ಲೆಂದರಲ್ಲಿ ಬಿಸಾಡುವುದರಿಂದ ಪ್ರಾಣಿ-ಪಕ್ಷಿಗಳು ಅವುಗಳನ್ನು ತಿನ್ನಲು ಬಂದು ಮತ್ತೆ ಎಲ್ಲೆಂದರಲ್ಲಿ ಬಿಸಾಡುವುದರಿಂದ ರೋಗ-ರುಜಿನಗಳು ಬರುವ ಸಾಧ್ಯತೆಯೇ ಹೆಚ್ಚು. ಇದರಿಂದ ನಾವು ನೀಡಿದ ಬಕೆಟ್ ನಲ್ಲಿಯೇ ಸಂಗ್ರಹಿಸಿಡಿ. ಸಂಜೆಯ ವೇಳೆ ಪೌರಕಾರ್ಮಿಕರು ಬಂದು ಅವುಗಳನ್ನು ಕೊಂಡೊಯ್ಯುತ್ತಾರೆ ಎಂದರು.

ಮೈಸೂರು ಈಗಾಗಲೇ ಎರಡು ಬಾರಿ ಸ್ವಚ್ಛ ನಗರಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮುಂದೆಯೂ ಆ ಪ್ರಶಸ್ತಿಯನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಸುತ್ತ ಮುತ್ತಲ ಪರಿಸರಗಳಲ್ಲಿ ಕಸಗಳನ್ನು ಸುರಿಯುವುದರಿಂದ ಅದರಲ್ಲಿ ಉತ್ಪನ್ನವಾಗುವ ಕ್ರಿಮಿ ಕೀಟಗಳಿಂದ ನಮಗೇ ಅನಾನುಕೂಲವಾಗಲಿದೆ ಎಂಬುದನ್ನು ಮನದಟ್ಟು ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರ ಆರ್.ಲಿಂಗಪ್ಪ, ಮಹಾನಗರಪಾಲಿಕೆ ಆಯುಕ್ತ ಜೆ.ಜಗದೀಶ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: