ಕ್ರೀಡೆ

ಐಪಿಎಲ್ ಟೂರ್ನಿ: ಅಗ್ರಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ,ಏ.10-ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿದೆ. ಕೋಲ್ಕತ್ತಾ ತಂಡವನ್ನು 7 ವಿಕೆಟ್‌ಗಳಿಂದ ಮಣಿಸೋ ಮೂಲಕ ಚೆನ್ನೈ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಸಂಪಾದಿಸಿದೆ.

ಗೆಲುವಿಗೆ 109 ರನ್ ಸುಲಭ ಟಾರ್ಗೆಟ್ ಪಡೆದ ಚೆನ್ನೈ ತಂಡಕ್ಕೆ ಕೆಕೆಆರ್ ದಾಳಿ ಎದುರಿಸುವುದು ಸುಲಭವಾಗಿರಲಿಲ್ಲ. ಡ್ಯೂ ಫ್ಯಾಕ್ಟರ್ ಇದ್ದರೂ ಕೆಕೆಆರ್ ಕೂಡ ಅದ್ಭುತ ದಾಳಿ ಸಂಘಟಿಸಿತು. ಹೀಗಾಗಿ ಶೇನ್ ವ್ಯಾಟ್ಸನ್ 17 ರನ್ ಸಿಡಿಸಿ ಔಟಾದರು. ಸುರೇಶ್ ರೈನಾ 14 ರನ್ ಸಿಡಿಸಿ ನಿರ್ಗಮಿಸಿದರು. ನಿಧಾನಗತಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದ ಚೆನ್ನೈಗೆ ಕಠಿಣ ಹಾದಿ ಎದುರಾಯಿತು.

ಫಾಫ್ ಡುಪ್ಲೆಸಿಸ್ ಹಾಗೂ ಅಂಬಾಟಿ ರಾಯುಡು ಜೊತೆಯಾಟದಿಂದ ಚೆನ್ನೈ ಚೇತರಿಸಿಕೊಂಡಿತು. ರಾಯುಡು 21 ರನ್ ಸಿಡಿಸಿ ಔಟಾದರು. ಕೇದಾರ್ ಜಾಧವ್ ಜೊತೆ ಸೇರಿದ ಫಾಪ್ ಡುಪ್ಲೆಸಿಸ್ ತಂಡದ ಗೆಲುವನ್ನು ಖಚಿತ ಪಡಿಸಿದರು. ಡುಪ್ಲೆಸಿಸ್ ಅಜೇಯ ರನ್ ಸಿಡಿಸಿದರೆ, ಜಾಧವ್ ಅಜೇಯ ರನ್ ಬಾರಿಸಿದರು. ಈ ಮೂಲಕ ಚೆನ್ನೈ 17.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. (ಎಂ.ಎನ್)

Leave a Reply

comments

Related Articles

error: