ದೇಶ

ಲಾಲು ಪ್ರಸಾದ್ ಯಾದವ್ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ

ನವದಹಲಿ,ಏ.10-ಬಹುಕೋಟಿ ಮೇವು ಹಗರಣದಲ್ಲಿ ದೋಷಿಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಲಾಲು ಅವರ ಜಾಮೀನು ಕೋರಿಕೆ ಅರ್ಜಿಯನ್ನು ವಿರೋಧಿಸಿ ಸಿಬಿಐ ನಿನ್ನೆ ಮಂಗಳವಾರ ಪ್ರತಿ-ಅಫಿದಾವಿತ್‌ ಸಲ್ಲಿಸಿತ್ತು. ಲಾಲು ಅವರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಜಾಮೀನು ಕೋರಿರುವುದು ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಸ್ಪಷ್ಟವಿರುವುದರಿಂದ ಅವರ ಅರ್ಜಿಯನ್ನು ಮನ್ನಿಸಬಾರದು ಎಂದು ಸಿಬಿಐ ತನ್ನ ಪ್ರತಿ-ಅಫಿದಾವಿತ್‌ ನಲ್ಲಿ ಹೇಳಿತ್ತು.

ಲಾಲು ಅವರು ಕಳೆದ ಎಂಟು ತಿಂಗಳಿಂದಲೂ ಆಸ್ಪತ್ರೆ ವಾರ್ಡಿನಲ್ಲಿ ಇದ್ದಾರೆ. ಆದಾಗ್ಯೂ ಅವರು ಅಲ್ಲಿದ್ದುಕೊಂಡೇ ರಾಜಕೀಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂದು ಕೂಡ ಸಿಬಿಐ ತನ್ನ ಅಫಿದಾವಿತ್‌ನಲ್ಲಿ ಹೇಳಿದೆ.

ಲಾಲು ಅವರು ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸಸ್‌ (ಆರ್‌ಐಎಂಎಸ್‌) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: