ಕ್ರೀಡೆದೇಶ

ವಿಮಾನ ನಿಲ್ದಾಣದಲ್ಲೇ ನಿದ್ರೆಗೆ ಜಾರಿದ ಧೋನಿ ದಂಪತಿ

ಚೆನ್ನೈ,.10-ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿಗಳಿಸಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನೆಡೆಸುತ್ತಿದ್ದಾರೆ.

ಐಪಿಎಲ್ ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿರುವ ಧೋನಿ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಧೋನಿ ಅದ್ಭುತ ನಾಯಕತ್ವ ಕೌಶಲ್ಯವನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಅಲ್ಲದೆ ಎಂದಿನಂತೆ ಸಹಜ ವ್ಯಕ್ತಿತ್ವವನ್ನು ಮೈಗೂಡಿಸಿದ್ದಾರೆ.

ಐಪಿಎಲ್ ವೇಳೆಯಲ್ಲಿ ತಡ ರಾತ್ರಿಯ ಪಂದ್ಯದ ಬಳಿಕ ಬೆಳ್ಳಂಬೆಳಗ್ಗೆ ವಿಮಾನವೇರಿ ಮುಂದಿನ ತಾಣವನ್ನು ತಲುಪಬೇಕಾಗುತ್ತದೆ. ಇದರಿಂದಾಗಿ ಆಟಗಾರರಿಗೆ ಬೇಕಾದಷ್ಟು ವಿಶ್ರಾಂತಿ ದೊರಕುವುದಿಲ್ಲ. ಈ ನಡುವೆ ಚೆನ್ನೈ ವಿಮಾನ ನಿಲ್ದಾಣದಲ್ಲೇ ಧೋನಿ ನಿದ್ರೆಗೆ ಜಾರಿದ್ದಾರೆ. ಧೋನಿ ಪಕ್ಕದಲ್ಲೇ ಪತ್ನಿ ಸಾಕ್ಷಿ ಸಿಂಗ್ ರಾವತ್ ಕೂಡಾ ನಿದ್ರಿಸುತ್ತಿದ್ದಾರೆ. ಈ ಫೋಟೋವನ್ನು ತಂಡದ ಸದಸ್ಯರು ತೆಗೆದಿದ್ದಾರೆ. ಚಿತ್ರವನ್ನು ಅಭಿಮಾನಿಗಳ ಜತೆಗೆ ಹಂಚಿಕೊಂಡಿದ್ದಾರೆ.

ಚೆನ್ನೈ ಆರು ಪಂದ್ಯಗಳಲ್ಲಿ ಐದು ಗೆಲುವುಗಳೊಂದಿಗೆ ಒಟ್ಟು 10 ಅಂಕಗಳನ್ನು ಸಂಪಾದಿಸಿತ್ತಲ್ಲದೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮಂಗಳವಾರ ಚೆನ್ನೈನ ಚಿಪಾಕ್ ಮೈದಾನದಲ್ಲಿ ಪ್ರಬಲ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಏಳು ವಿಕೆಟುಗಳ ಅಂತರದ ಗೆಲುವು ದಾಖಲಿಸಿತ್ತು.

ಬಿಡುವಿಲ್ಲದ ಐಪಿಎಲ್ ವೇಳಾಪಟ್ಟಿಗೆ ಹೊಂದಿಕೊಳ್ಳುವುದೇ ಆಟಗಾರರ ಪಾಲಿಗೆ ಸವಾಲಿನ ವಿಷಯವಾಗಿದೆ. ಅಲ್ಲದೆ ಟೂರ್ನಿಯುದ್ಧಕ್ಕೂ ಗರಿಷ್ಠ ಫಿಟ್ನೆಸ್ ಮಟ್ಟವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಚೆನ್ನೈ ತನ್ನ ಮುಂದಿನ ಪಂದ್ಯವನ್ನು ಏ.11ರಂದು ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. (ಎಂ.ಎನ್)

Leave a Reply

comments

Related Articles

error: