ಮೈಸೂರು

ವಿಕಲಚೇತನರ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಮೈಸೂರಿನ ರೈಲ್ವೇ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಕ್ರಿಕೆಟ್ ಸಂಸ್ಥೆ ಮತ್ತು ಪರಿವರ್ತನಂ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ 5ದಿನಗಳ ವಿಕಲಚೇತನರ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಸೋಮವಾರ ಬಿಜೆಪಿ ಮುಖಂಡ ಕೆ.ಆರ್ ಮೋಹನ್ ಕುಮಾರ್ ಬ್ಯಾಟಿಂಗ್ ನಡೆಸುವ ಮೂಲಕ ಚಾಲನೆ ನೀಡಿದರು.

ಕರ್ನಾಟಕ, ತಮಿಳುನಾಡು, ಆಂಧ್ರ, ಹಿಮಾಚಲ್ ಪ್ರದೇಶ್ ರಾಜ್ಯಗಳ  ನಡುವೆ ನಡೆಯುತ್ತಿರುವ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ  ಮೊದಲು ಕರ್ನಾಟಕ ಮತ್ತು ಆಂಧ್ರ ತಂಡ ಸೆಣಸಾಡುತ್ತಿದೆ. ಕೆ.ಆರ್ ಮೋಹನ್ ಕುಮಾರ್ ಮಾತನಾಡಿ ವಿಕಲಚೇತನರಿಗೆ ಎಲ್ಲರಿಗಿಂತ ಹೆಚ್ಚು ಸಾಮರ್ಥ್ಯವಿರುತ್ತದೆ ಎಂಬುದಕ್ಕೆ ಈ ಕ್ರಿಕೆಟ್ ಪಂದ್ಯಾವಳಿ ನಿದರ್ಶನವಾಗಿದೆ. ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿ ಮುಖ್ಯವಾಗುತ್ತದೆ ಇಂತಹ  ಪ್ರತಿಭಾನ್ವಿತ ವಿಕಲಚೇತನ ಕ್ರೀಡಾ ಸ್ಪರ್ಧಿಗಳಿಗೆ ಅನುಕಂಪಕ್ಕಿಂತ ಅವರ ಪ್ರತಿಭೆಗೆ ಅನುಗುಣವಾಗಿ ಖಾಸಗಿ ಕ್ಷೇತ್ರಗಳಲ್ಲಿ ಸಾಮಾಜಿಕ ಕಳಕಳಿಯಿಂದ ಖಾಸಗಿ ಕಂಪನಿಗಳು ಉದ್ಯೋಗದ ಅವಕಾಶ ನೀಡಲು ಮುಂದಾಗಬೇಕು ಎಂದರು. ಇದು ಕೇವಲ ಪಂದ್ಯಾವಳಿಯಲ್ಲ.  ಸಮ್ಮಿಲನದ ಕಾರ್ಯಕ್ರಮವಾಗಿದ್ದು ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನದ ಮಾಜಿ ಅಧ್ಯಕ್ಷ ಆರ್ ಮೂರ್ತಿ, ವಿದ್ಯಾವಿಕಾಸ್ ಸಂಸ್ಥೆಯ  ಕವೀಶ್ ಗೌಡ, ಯುವಕಾಂಗ್ರೆಸ್ ಮುಖಂಡ ಸಿ.ಎಸ್ ರಘು,  ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕರ್ನಾಟಕ ವಿಕಲಚೇತನ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶ್ರೀಧರ್, ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: