ಮೈಸೂರು

ಕಾಂಗ್ರೆಸ್ಸಿಗೆ ಡಿ.ಮಾದೇಗೌಡ ರಾಜೀನಾಮೆ

ಕಾಂಗ್ರೆಸ್ ಪಕ್ಷಕ್ಕೆ ಎಸ್.ಎಂ. ಕೃಷ್ಣ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮೈಸೂರಿನ ಹಿರಿಯ ಕಾಂಗ್ರೆಸ್ಸಿಗ ಡಿ. ಮಾದೇಗೌಡ ಅವರೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಡಿ.ಮಾದೇಗೌಡ ಅವರು ಮೈಸೂರಿನ ಕಾಂಗ್ರೆಸ್‍ ಮುಖಂಡರಾಗಿದ್ದು ವಿಧಾನ ಪರಿಷತ್ ಸದಸ್ಯರಾಗಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – ಮುಡಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಕಾಂಗ್ರೆಸ್’ನಲ್ಲಿ ಹಿರಿಯರನ್ನು ಕಡೆಗಣಿಸಿದ್ದರಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಾಕಷ್ಟು ಹತ್ತಿರವಿದ್ದ ಡಿ.ಮಾದೇಗೌಡ ಅವರು, ಸಿಎಂ ಅವರ ಎಲ್ಲ ಕಾರ್ಯಕ್ರಮಗಳಲ್ಲೂ ಹಾಜರಿರುತ್ತಿದ್ದರು. ಸಿಎಂ ಆಪ್ತ ರಾಜೀನಾಮೆ ನೀಡಿರುವುದು ಮೈಸೂರಿನ ಪಕ್ಷದ ಮುಖಂಡರಿಗೆ ಅಚ್ಚರಿ ತರಿಸಿದೆ.

Leave a Reply

comments

Related Articles

error: