ಕರ್ನಾಟಕಪ್ರಮುಖ ಸುದ್ದಿ

ಎಚ್.ವೈ.ಮೇಟಿ ಲೈಂಗಿಕ ಹಗರಣ ಪ್ರಕರಣ: ಆರ್.ಟಿ.ಐ ಕಾರ್ಯಕರ್ತ, ಪತ್ರಕರ್ತರಿಗೆ ನೋಟಿಸ್

ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕು ಗೊಳಿಸಿದ್ದಾರೆ.

ಆರ್.ಟಿ.ಐ ಕಾರ್ಯಕರ್ತ ರಾಜಶೇಖರ ಮುಲಾಲಿ ಹಾಗೂ ಪತ್ರಕರ್ತರಿಗೆ ನಿನ್ನೆ ಸಂಜೆ ನೋಟಿಸ್ ನೀಡಿದಾರೆಂಬ ಮಾತುಗಳು ಕೇಳಿ ಬಂದಿದೆ. ಕಾರಣ, ಈ ಲೈಂಗಿಕ ಪ್ರಕರಣ ಹೊರಬಂದ ಬಳಿಕ ಇದರಲ್ಲಿ ಯಾರು ಭಾಗಿಯಾಗಿದ್ದಾರೆ? ಪ್ರಕರಣವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದ್ದಾರೆ? ಮೇಟಿ ಪ್ರಕರಣಕ್ಕೂ ಹಾಗೂ ಇವರಿಗೂ ಏನಾದರೂ ಸಂಬಂಧವಿದೆಯಾ? ಎಂಬೆಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ಆರ್.ಟಿ.ಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಸೇರಿದಂತೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ನಾಲ್ವರು ಪತ್ರಕರ್ತರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಇನ್ನು ಬೆಂಗಳೂರಿನಲ್ಲಿರುವ ಸಿಐಡಿ ಕಚೇರಿಗೆ ಫೆ.1ರಂದು ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಉಪ ಅಧೀಕ್ಷಕ ಸಿ.ಆರ್.ರವಿಶಂಕರ್ ಈ ನೋಟಿಸ್ ನಲ್ಲಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

comments

Related Articles

error: