ಪ್ರಮುಖ ಸುದ್ದಿ

ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಮತದಾನವನ್ನು ಸಂಭ್ರಮಿಸಿ ಗೂಗಲ್ ನಿಂದ ಡೂಡಲ್

ದೇಶ(ನವದೆಹಲಿ)ಏ.11:- ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭವಾಗಿದ್ದು, ಗೂಗಲ್ ಡೂಡಲ್ ಕೂಡ ಮತದಾನದ ಕುರಿತು ಜಾಗೃತಿ ಮೂಡಿಸಿ, ಸಂಭ್ರಮಿಸಿದೆ.

ತೋರು ಬೆರಳಿಗೆ ಶಾಯಿ ಹಾಕಿಸಿಕೊಂಡು ತಾನೂ ಮತ ಚಲಾಯಿಸಿದಂತೆ ತೋರಿಸಿದೆ. ಮತದಾನಮಾಡಿದ ಬೆರಳಿಗೆ ಶಾಯಿ ಹಚ್ಚಿದ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ಮತದಾನದ ಪ್ರಕ್ರಿಯೆಗಳ ವಿವರಣೆ ಸಿಗಲಿದೆ. ಅಷ್ಟೇ ಅಲ್ಲ ಮೊದಲ ಬಾರಿಗೆ ಮತದಾನ ಮಾಡುವವರಿಗೆ ಅಗತ್ಯವಾದ ಮಾಹಿತಿಯನ್ನೂ ಒದಗಿಸಲಿದೆ.

ದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಇಂದು ಮೊದಲ ಹಂತದ ಮತದಾನ ಪ್ರಕ್ರಿಯೆ, ತೆಲಂಗಾಣ, ಆಂಧ್ರಪ್ರದೇಶ ದೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ನಡೆಯಲಿದೆ. (ಎಸ್.ಎಚ್)

Leave a Reply

comments

Related Articles

error: